ಭಾರತದ ಕೋವಾಕ್ಸಿನ್‌ ಲಸಿಕೆ ಎಷ್ಟು ಪರಿಣಾಮಕಾರಿ ಗೊತ್ತಾ?

masthmagaa.com:

ಹೈದ್ರಾಬಾದ್​ನ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜಂಟಿಯಾಗಿ ಅಭಿವೃದ್ಧಿಪಡಿಸಿರೋ ಕೋವಾಕ್ಸಿನ್ ಲಸಿಕೆ ಒಟ್ಟಾರೆಯಾಗಿ 78 ಪರ್ಸೆಂಟ್​ ಪರಿಣಾಮಕಾರಿ ಅಂತ ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಹೇಳಿಕೊಂಡಿವೆ. ಜೊತೆಗೆ ಗಂಭೀರ ಪ್ರಮಾಣದ ಕೊರೋನಾ ಇರೋರಿಗೆ 100 ಪರ್ಸೆಂಟ್ ಮತ್ತು ರೋಗದ ಲಕ್ಷಣ ಇಲ್ಲದವರಿಗೆ 70 ಪರ್ಸೆಂಟ್​ ಪರಿಣಾಮಕಾರಿಯಾಗಿದೆ. ಸೋಂಕಿತರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆಯನ್ನ ಕೂಡ ಇದು ಕಮ್ಮಿ ಮಾಡುತ್ತೆ. ಎಲ್ಲಕ್ಕಿಂತ ಇಂಪಾರ್ಟೆಂಟ್​ ಅಂದ್ರೆ ಕೊರೋನಾದ ಹಲವು ರೂಪಾಂತರಿ ವೈರಾಣುಗಳನ್ನ ಕೂಡ ಕೋವಾಕ್ಸಿನ್ ಲಸಿಕೆ ನಿಷ್ಕ್ರಿಯಗೊಳಿಸುತ್ತೆ. ಎರಡೆರಡು ಬಾರಿ ರೂಪಾಂತರಿಗೊಂಡ ಅಂದ್ರೆ ಡಬಲ್ ಮ್ಯೂಟಂಟ್​ ಸ್ಟ್ರೈನ್ ಅನ್ನ ಕೂಡ ನಿಷ್ಕ್ರಿಯಗೊಳಿಸುತ್ತೆ ಅಂತ ಐಸಿಎಂಆರ್ ಹೇಳಿದೆ. ಈ ಲಸಿಕೆಯ ಮೂರನೇ ಹಂತದ ಮಾನವ ಪ್ರಯೋಗದ ವೇಳೆ ರೋಗ ಲಕ್ಷಣ ಇರುವ 87 ಕೇಸ್​​ಗಳನ್ನ ಅಧ್ಯಯನ ನಡೆಸಿದಾಗ ಸಿಕ್ಕ ಎರಡನೇ ಮಧ್ಯಂತರ ವಿಶ್ಲೇಷಣೆ ವೇಳೆ ಈ ವಿಚಾರ ಗೊತ್ತಾಗಿದೆ. ಮೊದಲ ಮಧ್ಯಂತರ ವಿಶ್ಲೇಷಣೆ ವೇಳೆ ಅಂದ್ರೆ ಮಾರ್ಚ್​ ತಿಂಗಳಲ್ಲಿ ಕೋವಾಕ್ಸಿನ್ ಲಸಿಕೆ 81 ಪರ್ಸೆಂಟ್​ ಪರಿಣಾಮಕಾರಿ ಅಂತ ಹೇಳಲಾಗಿತ್ತು. ಇದೀಗ ಆ ಪರ್ಸೆಂಟೇಜ್​ ಸ್ವಲ್ಪ ಕಮ್ಮಿಯಾಗಿ 78ಕ್ಕೆ ಇಳಿದಿದೆ.

-masthmagaa.com

Contact Us for Advertisement

Leave a Reply