ಕೊರೋನಾ ಡೆತ್ ಸೆರ್ಟಿಫಿಕೇಟ್​ ಸಂಬಂಧ ಹೊಸ ಮಾರ್ಗಸೂಚಿ!

masthmagaa.com:

ಕೊರೋನಾದಿಂದಾಗಿ ಮೃತಪಟ್ಟವರ ಡೆತ್​ ಸರ್ಟಿಫಿಕೇಟ್​​ ಸಂಬಂಧ ಆರೋಗ್ಯ ಇಲಾಖೆ ಮತ್ತು ಐಸಿಎಂಆರ್ ಅಂದ್ರೆ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಹೊಸ ಗೈಡ್​​ಲೈನ್ಸ್ ನೀಡಿದೆ ಅಂತ ಸುಪ್ರೀಂಕೋರ್ಟ್​​ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಈ ಹಿಂದೆ ಕೊರೋನಾ ಸಂಬಂಧಿತ ಸಾವುಗಳಿಗೆ ಅಧಿಕೃತ ದಾಖಲೆ ನೀಡುವಂತೆ ಸುಪ್ರೀಂಕೋರ್ಟ್​ ಕೇಂದ್ರ ಸರ್ಕಾರವನ್ನು ತರಾಟೆಗೆ ತಗೊಂಡಿತ್ತು. ಅದಾದ 10 ದಿನದಲ್ಲಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿ, ಹೊಸ ಗೈಡ್​​ಲೈನ್ಸ್ ಬಗ್ಗೆ ಮಾಹಿತಿ ನೀಡಿದೆ. ಅದ್ರ ಪ್ರಕಾರ ಕೊರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದು, ಆಸ್ಪತ್ರೆ ಅಥವಾ ಕೊರೋನಾ ಫೆಸಿಲಿಟಿಗಳಲ್ಲಿ ದಾಖಲಾಗಿ, ಪ್ರಾಣ ಬಿಟ್ರೆ ಅದನ್ನು ಕೊರೋನಾ ಸಾವು ಅಂತ ಪರಿಗಣಿಸಲಾಗುತ್ತೆ. ಅದೇ ರೀತಿ ಕೊರೊನಾ ಪಾಸಿಟಿವ್ ಬಂದು ಆಸ್ಪತ್ರೆಗೆ ದಾಖಲಾಗದೇ 30 ದಿನಗಳ ಬಳಿಕ ಪ್ರಾಣ ಹೋದ್ರೆ ಅದನ್ನು ಕೂಡ ಕೊರೋನಾ ಸಾವು ಅಂತ ಪರಿಗಣಿಸಲಾಗುತ್ತೆ. ಅದೇ ಕೊರೋನಾ ಪಾಸಿಟಿವ್ ಬಂದಿರೋ ವ್ಯಕ್ತಿ ವಿಷದಿಂದ, ಆತ್ಮಹತ್ಯೆ ಮಾಡ್ಕೊಂಡ್ರೆ, ಕೊಲೆಯಾದ್ರೆ ಅಥವಾ ಅಪಘಾತಕ್ಕೀಡಾದ್ರೆ ಅದನ್ನು ಕೊರೋನಾ ಸಾವು ಅಂತ ಪರಿಗಣಿಸಲು ಸಾಧ್ಯವಿಲ್ಲ ಅಂತ ಕೂಡ ಗೈಡ್​​ಲೈನ್ಸ್​ನಲ್ಲಿ ಹೇಳಲಾಗಿದೆ.

-masthmagaa.com

Contact Us for Advertisement

Leave a Reply