ಬೊಮ್ಮಾಯಿ & ಟೀಂ: ಹೊಸ ಸಚಿವರ ಪರಿಚಯ ಇಲ್ಲಿದೆ ನೋಡಿ..

masthmagaa.com:

ಸಿಎಂ ಆದಾಗಿನಿಂದ ಏಕಾಂಗಿಯಾಗಿದ್ದ ಬಸವರಾಜ ಬೊಮ್ಮಾಯಿ ಇವತ್ತು ತಮ್ಮ ಟೀಂ ಅನ್ನ ರೆಡಿ ಮಾಡಿಕೊಂಡಿದ್ದಾರೆ. ಅಂದ್ರೆ ಬೊಮ್ಮಾಯಿ ಅವರ ಸಚಿವ ಸಂಪುಟ ರಚನೆಯಾಗಿದ್ದು, ಒಟ್ಟು 29 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಲ್ಲಿ 6 ಜನ ಮೊದಲ ಸಲ ಸಚಿವರಾದ್ರೆ, ಉಳಿದವರು ಈ ಹಿಂದೆ ಸಚಿವರಾಗಿದ್ದ ಅನುಭವ ಹೊಂದಿದ್ದಾರೆ. ಹಲವು ಹಿರಿಯರನ್ನ ಕ್ಯಾಬಿನೆಟ್​​ನಿಂದ ಕೈಬಿಟ್ಟು ಪಕ್ಷ ಸಂಘಟನೆಯ ಕೆಲಸಕ್ಕೆ ಹಚ್ಚಲಾಗಿದೆ. ಉಳಿದಂತೆ ಯಡಿಯೂರಪ್ಪ ಅವರ ಅವಧಿಯಲ್ಲಿ ಸೃಷ್ಟಿಸಲಾಗಿದ್ದ ಮೂರು ಡಿಸಿಎಂ ಹುದ್ದೆಗಳನ್ನ ರದ್ದು ಮಾಡಲಾಗಿದೆ. ಬೊಮ್ಮಾಯಿ ಸಂಪುಟದಲ್ಲಿ ಬಿಎಸ್​ವೈ ಪುತ್ರ ವಿಜಯೇಂದ್ರರನ್ನ ಸೇರಿಸಲಾಗುತ್ತೆ ಅನ್ನೋ ಮಾತುಗಳು ಕೇಳಿ ಬಂದ್ರೂ ಅವರನ್ನ ಸೇರಿಸಿಲ್ಲ. ಈ ಬಗ್ಗೆ ಯಡಿಯೂರಪ್ಪ ಮತ್ತು ವಿಜಯೇಂದ್ರ ಜೊತೆ ವರಿಷ್ಠರು ಮಾತನಾಡಿದ್ದಾರೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಮಂತ್ರಿಗಿರಿ ರೇಸ್​​ನಲ್ಲಿದ್ದ ಹಲವರ ಕನಸು ನುಚ್ಚು ನೂರಾಗಿದೆ. ಅಸಮಾಧಾನಿತರನ್ನ ಸಮಾಧಾನಿಸುವ ಕೆಲಸ ಮಾಡ್ತೀವಿ. ಮುಂದೆ ಅವರಿಗೂ ಅವಕಾಶ ಕೊಡೋಕೆ ಪ್ರಯತ್ನ ಪಡ್ತೀವಿ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಜೊತೆಗೆ 29 ನೂತನ ಸಚಿವರಿಗೆ ಯಾವ ಖಾತೆ ಅನ್ನೋದು ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ. ಒಂದೆರಡು ದಿನದಲ್ಲಿ ಯಾವ ಖಾತೆ ಅನ್ನೋದನ್ನ ಹೇಳ್ತೀವಿ. ಅಲ್ಲಿವರೆಗೆ ಎಲ್ಲಾ ಸಚಿವರನ್ನ ನೆರೆ ಪರಿಹಾರ ಮತ್ತು ಕೊರೋನಾ 3ನೇ ಅಲೆ ನಿರ್ವಹಣೆಗೆ ಕಳಿಸಿಕೊಡಲಾಗುತ್ತೆ ಅಂತ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಇನ್ನು ಸಿಎಂ ಬೊಮ್ಮಾಯಿ ಕ್ಯಾಬಿನೆಟ್​​ನ 29 ನೂತನ ಸಚಿವರಾರು, ಅವರು ಯಾವ ಕ್ಷೇತ್ರದವರು, ಜಿಲ್ಲೆಯವರು, ಎಷ್ಟುಸಲ ಶಾಸಕರಾಗಿದ್ದಾರೆ, ಸಚಿವರಾಗಿದ್ದಾರೆ ಅನ್ನೋದನ್ನ ತಿಳಿಸಿಕೊಡೋ ಸಪರೇಟ್​ ವಿಡಿಯೋ ಮಾಡಿದ್ದೀವಿ. ನಮ್​ ಚಾನಲ್​ಗೆ ಹೋಗಿ ನೀವದನ್ನ ನೋಡಬಹುದು.

-masthmagaa.com

Contact Us for Advertisement

Leave a Reply