ಜಮ್ಮು ಕಾಶ್ಮೀರದಲ್ಲಿ ಅಮಾಯಕರ ಹತ್ಯೆ! ಫೀಲ್ಡ್​​ಗಿಳಿದ ಎನ್​ಐಎ

masthmagaa.com:

ಜಮ್ಮು ಕಾಶ್ಮೀರದಲ್ಲಿ ಇತ್ತೀಚಿಗೆ ನಡೆದ 11 ಮಂದಿ ನಾಗರಿಕರ ಹತ್ಯೆ ಕೇಸ್​​ಗಳ ಪೈಕಿ 6ನ್ನು ಎನ್​​ಐಎ ಅಂದ್ರೆ ರಾಷ್ಟ್ರೀಯ ತನಿಖಾ ದಳ ವಹಿಸಿಕೊಳ್ಳಲಿದೆ. ಈ ಹತ್ಯೆಗಳ ಹಿಂದೆ ದಿ ನ್ಯಾಷನಲ್ ರೆಸಿಸ್ಟೆನ್ಸ್​ ಫ್ರಂಟ್ ಮತ್ತು ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳ ಕೈವಾಡ ಇದೆ ಅನ್ನೋ ಆರೋಪ ಕೂಡ ಇದೆ. ಈಗಾಗಲೇ ಎನ್​ಐಎ ಈ ಹತ್ಯೆಗಳ ಹಿಂದಿನ ಪಿತೂರಿಯನ್ನು ಬಯಲಿಗೆಳೆಯಲು ತನಿಖೆ ಶುರು ಮಾಡಿದೆ. ಈಗಾಗಲೇ 9 ಜನರನ್ನು ಅರೆಸ್ಟ್ ಮಾಡಿದೆ. 25ಕ್ಕೂ ಹೆಚ್ಚು ಸ್ಥಳಗಳಲ್ಲಿ ರೇಡ್ ಮಾಡಿದೆ. ಈ ನಡುವೆ ಈ ದಾಳಿಯಲ್ಲಿ ಕೋಆರ್ಡಿನೇಟ್ ಮಾಡ್ತಿರೋ ಜನರ ಬಗ್ಗೆ ಮಾಹಿತಿ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ರೇಡ್ ಪ್ರಮಾಣ ಮತ್ತಷ್ಟು ಹೆಚ್ಚೋ ಸಾಧ್ಯತೆ ಇದೆ ಅಂತ ಮೂಲಗಳು ತಿಳಿಸಿವೆ. ಮತ್ತೊಂದ್ಕಡೆ ಜಮ್ಮು ಕಾಶ್ಮೀರದಲ್ಲಿ ಭಯದ ವಾತಾವರಣ ಸೃಷ್ಟಿಸಿ, ಉದ್ಯಮ ಚಟುವಟಿಕೆಗಳನ್ನು ಹೆಚ್ಚಿಸೋ ಸರ್ಕಾರದ ಪ್ರಯತ್ನಕ್ಕೆ ತಡೆಯೊಡ್ಡಲು ಈ ಪಿತೂರಿ ನಡೆಸಲಾಗಿದೆ ಅಂತ ಅಧಿಕಾರಿಗಳು ತಿಳಿಸಿದ್ದಾರೆ.

-masthmagaa.com

Contact Us for Advertisement

Leave a Reply