ನೈಜೆರಿಯಾ: ಕ್ಯಾಥೋಲಿಕ್‌ ಚರ್ಚ್‌ ಮೇಲೆ ದಾಳಿ, 50ಕ್ಕೂ ಹೆಚ್ಚು ಜನರ ಹತ್ಯೆ!

masthmagaa.com:

ನೈಜೇರಿಯಾದ ಚರ್ಚ್‌ ಒಂದರಲ್ಲಿ 2019ರ ಶ್ರೀಲಂಕಾ ಮಾದರಿಯಲ್ಲಿ ಗುಂಡಿನ ದಾಳಿ ನಡೆದಿದ್ದು ಸುಮಾರು 50ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ. ಅಲ್ಲಿನ ಓವೋ ನಗರದ ಸೇಂಟ್‌ ಫ್ರಾನ್ಸಿಸ್‌ ಕ್ಸೇವಿಯರ್‌ ಕ್ಯಾಥೋಲಿಕ್‌ ಚರ್ಚ್‌ನಲ್ಲಿ ಈ ದಾಳಿ ನಡೆದಿದೆ. ಸ್ಥಳೀಯ ಪೋಲಿಸ್‌ ನಿಖರವಾದ ಮಾಹಿತಿ ನೀಡಿಲ್ಲವಾದ್ರೂ ಹತ್ತಿರದ ಆಸ್ಪತ್ರೆಯ ವೈದ್ಯರೊಬ್ರು ಮಕ್ಕಳು, ಮಹಿಳೆಯರು ಸೇರಿದಂತೆ 50 ಕ್ಕೂ ಹೆಚ್ಚು ಮೃತದೇಹಗಳನ್ನ ಫೆಡರಲ್‌ ಮೆಡಿಕಲ್‌ ಸೆಂಟರ್‌ಗೆ ಕಳಿಸಿರೋದಾಗಿ ಹೇಳಿದ್ದಾರೆ. ಜೊತೆಗೆ ಹಲವಾರು ಜನ ಗಾಯಗೊಂಡಿರೋದಾಗಿ ಕೂಡ ತಿಳಿಸಿದ್ದಾರೆ. ಚರ್ಚ್‌ನಲ್ಲಿ ಪ್ರಾರ್ಥನೆ ಮಾಡ್ತಿದ್ದವರ ಮೇಲೆ ಗುಂಡಿನ ಮಳೆಗರಿದಿರೋದಾಗಿ ಪ್ರತ್ಯಕ್ಷದರ್ಶಿ ಅಜಿಬೊಲಾ ಅನ್ನೋವ್ರು ಹೇಳಿದ್ದಾರೆ. ಇದುವರೆಗು ಯಾವುದೇ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿಲ್ಲ. ದಾಳಿಕೋರ ಯಾರು, ಅವನ ಉದ್ಧೇಶವೇನಾಗಿತ್ತು ಅನ್ನೋದು ಕೂಡ ಗೊತ್ತಾಗಿಲ್ಲ. ಆದ್ರೆ ಅಲ್ಲಿನ ಸಂಸದ ಅಡೆಯೆಮಿ ಒಲಾಯೆಮಿ ಮಾತ್ರ, ಫುಲಾನಿ ಉಗ್ರರು ಈ ಕೃತ್ಯವ್ಯಸಗಿರಬಹುದು ಅಂತ ಹೇಳಿದ್ದಾರೆ. ಇನ್ನು ಘಟನೆಯನ್ನ ಖಂಡಿಸಿ ಮಾತಾಡಿರೋ ನೈಜೆರಿಯಾದ ಅಧ್ಯಕ್ಷ ಮುಹಮ್ಮದು ಬುಹಾರಿ, ಏನೇ ಆದ್ರು ನಮ್ಮ ದೇಶವನ್ನ ರಾಕ್ಷಸರ ಕೈಗೆ ಒಪ್ಪಿಸಲ್ಲ, ತಪ್ಪಿತಸ್ಥರಿಗೆ ಶಿಕ್ಷೆಯಾಗೋವರ್ಗು ಬಿಡಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply