ನಿರ್ಭಯಾ ಕೇಸ್​​ನಲ್ಲಿ ಡೆತ್​ ವಾರೆಂಟ್ ಜಾರಿ..ಡೆತ್ ವಾರೆಂಟ್ ಎಂದರೇನು..?

ಹಾಯ್ ಫ್ರೆಂಡ್ಸ್…ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಫೈನಲಿ ಡೆತ್ ವಾರಂಟ್ ಜಾರಿ ಯಾಗಿದೆ. ತಿಹಾರ್ ಜೈಲಿನಲ್ಲಿ 4 ನೇಣುಗಂಬಗಳನ್ನು ಕೂಡ ರೆಡಿ ಮಾಡಿಕೊಳ್ಳಲಾಗಿದೆ. ಮುಂಚೆ ಒಂದೇ ಇತ್ತು. ಈಗ ನಾಲ್ಕು ಜನರನ್ನು ಒಟ್ಟಿಗೆ ಗಲ್ಲುಶಿಕ್ಷೆಗೆ ಒಳಪಡಿಸಬೇಕಾಗಿರುವುದರಿಂದ ಇನ್ನು ಮೂರು ಹೊಸ ನೇಣುಗಂಬಗಳನ್ನು ರೆಡಿ ಮಾಡಲಾಗಿದೆ. ಫೈನಲಿ ಜನವರಿ 22ರಂದು ಬೆಳಗ್ಗೆ 7ಗಂಟೆಗೆ ಗಲ್ಲುಶಿಕ್ಷೆ ಅಂತ ಡೆತ್ ವಾರಂಟ್ ಜಾರಿಯಾಗಿದೆ. ಹಾಗಾದ್ರೆ ಬನ್ನಿ ಈ ಡೆತ್ ವಾರೆಂಟ್ ಅಂದ್ರೆ ಏನು ಅಂತ ನೋಡೋಣ.

ಡೆತ್​ ವಾರೆಂಟ್ ಎಂದರೇನು..?

Code of criminal procedure 1973, ಅಂದ್ರೆ ಸಿಆರ್​​ಪಿಸಿ ಪ್ರಕಾರ ಇದರಲ್ಲಿ ಒಟ್ಟು 56 ಫಾರ್ಮ್ಸ್ ಇರುತ್ತವೆ‌. ಇದರಲ್ಲಿ ಫಾರಂ ನಂಬರ್ 42ನ್ನು ಡೆತ್ ವಾರಂಟ್ ಅಂತಾ ಕರೆಯಲಾಗುತ್ತೆ. ಈ ಫಾರಂ ಮೇಲೆ warrant of execution of a sentence of death ಅಂತ ಬರೆಯಲಾಗಿರುತ್ತೆ. ಇದನ್ನು ಬ್ಲಾಕ್ ವಾರಂಟ್ ಅಂತಲೂ ಕರೆಯಲಾಗುತ್ತದೆ. ಇದು ಜಾರಿಯಾದ ನಂತರವಷ್ಟೇ ಯಾವುದೇ ವ್ಯಕ್ತಿಗೆ ಗಲ್ಲುಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ. ಇದರಲ್ಲಿ ಒಂದಷ್ಟು ಕಾಲಮ್ಸ್ ಇರುತ್ತದೆ. ಇದರಲ್ಲಿ ಜೈಲಿನ ನಂಬರ್… ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೈದಿ ಹೆಸರು, ಕೇಸ್ ನಂಬರ್, ಈ ಸಾವಿನ ವಾರೆಂಟ್ ಜಾರಿಯಾದ ತಾರೀಕು, ಗಲ್ಲುಶಿಕ್ಷೆ ಜಾರಿ ಮಾಡುವ ತಾರೀಕು, ಗಲ್ಲುಶಿಕ್ಷೆ ಜಾರಿ ಮಾಡುವ ಜಾಗ ಎಲ್ಲ ವಿವರಗಳನ್ನು ಈ ವಾರಂಟ್‌ನಲ್ಲಿ ಬರೆಯಲಾಗಿರುತ್ತದೆ. ಜೊತೆಗೆ ಅಪರಾಧಿಯ ಪ್ರಾಣ ಹೋಗುವವರೆಗೂ ನೇಣು ಕಂಬದಲ್ಲಿ ನೇತಾಡಿಸಬೇಕು, ಅಂದ್ರೆ be hanged by the neck until he is dead ಅಂತ ಬರೆಯಲಾಗಿರುತ್ತದೆ. ಈ ವಾರಂಟ್ ಜೈಲಿನ ಅಧಿಕಾರಿಯ ಕೈ ತಲುಪುತ್ತದೆ. ಗಲ್ಲು ಶಿಕ್ಷೆ ವಿಧಿಸಿದ ಬಳಿಕ ಅಪರಾಧಿಯ ಸಾವಿನ ದೃಢೀಕರಣ ಪತ್ರವನ್ನು ಕೋರ್ಟ್ ಗೆ ವಾಪಸ್ ಸಬ್ಮಿಟ್ ಮಾಡಬೇಕಾಗುತ್ತದೆ. ಇದರ ಜೊತೆಗೆ ಆ ಸಾವಿನ ವಾರಂಟ್​​ನ್ನು ಕೂಡ ವಾಪಸ್ ಕೋರ್ಟ್​​​​ಗೆ  ಕೊಡಲಾಗುತ್ತದೆ.

ನಿರ್ಭಯಾ ಅಪರಾಧಿಗಳ ವಿರುದ್ಧ ಡೆತ್ ವಾರೆಂಟ್..!

ಈಗ ನಿರ್ಭಯಾ ಕೇಸಿನ ನಾಲ್ವರು  ಅಪರಾಧಿಗಳಾದ ಪವನ್,  ವಿನಯ್,  ಮುಖೇಶ್ ಮತ್ತು ಅಕ್ಷಯ್​​ಗೆ ಈಗಾಗಲೇ ಸಾವಿನ ವಾರಂಟ್ ಜಾರಿಯಾಗಿದೆ. ಬದುಕಲು ಕಡೆ ಅವಕಾಶವಾಗಿ ಅಪರಾಧಿಗಳು ಸುಪ್ರೀಂಕೋರ್ಟ್​​​ಗೆ  ಮೇಲ್ಮನವಿ ಹೋಗಲು ಅವಕಾಶ ಇದೆ. ಆದರೆ ಈಗಾಗಲೇ ಸುದೀರ್ಘ ವಿಚಾರಣೆ ಪ್ರಕ್ರಿಯೆ ಮುಗಿದು ತೀರ್ಪು ಬಂದಿರುವುದರಿಂದ ಸುಪ್ರೀಂಕೋರ್ಟ್​​​​ನಲ್ಲಿ ಪಾರಾಗುವ ಸಾಧ್ಯತೆ ತುಂಬಾ ಕಡಿಮೆ. ಇನ್ನು ರಾಷ್ಟ್ರಪತಿಗಳಿಗೆ ಕ್ಷಮಾದಾನದ ಅರ್ಜಿಯನ್ನು ಸಲ್ಲಿಸಬಹುದು. ಇದು ಸಂವಿಧಾನಾತ್ಮಕವಾಗಿ ಕಡೆಯ ಆಯ್ಕೆ. ಆದರೆ ಇನ್ನು ಬಚಾವಾಗುವ ಸಾಧ್ಯತೆ ಇಲ್ಲ. ಯಾಕಂದ್ರೆ ಈ ನಾಲ್ಕು ಅಪರಾಧಿಗಳ ಪೈಕಿ ಒಬ್ಬನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿ ಈಗಾಗಲೇ ತಿರಸ್ಕರಿಸಿ ಅಗಿದೆ. ಹೀಗಾಗಿ ಉಳಿದ ಮೂವರಿಗೆ ಕ್ಷಮಾದಾನ ಸಾಧ್ಯತೆ ಬಹುತೇಕ ಇಲ್ಲ. ಇನ್ನು ಈ ಕೇಸ್​​ನಲ್ಲಿ ಏನೇ ಹೊಸ ಬೆಳವಣಿಗೆಯಾದರೂ ನಾವು ನಿಮ್ಮ ಗಮನಕ್ಕೆ ತರುತ್ತೇವೆ. ಹೀಗಾಗಿ http://masthmaga.com ನೋಡ್ತಾ ಇರಿ.. ನಮ್ಮ ವೆಬ್​​ಸೈಟ್​​​ನಲ್ಲಿ ಸುದ್ದಿ ಓದುತ್ತಾ ಇರಿ. ಧನ್ಯವಾದ.

Contact Us for Advertisement

Leave a Reply