ನಿರ್ಭಯಾ ಅತ್ಯಾಚಾರಿಗಳ ಅರ್ಜಿ ವಜಾ…ಪಾಪಿಗಳು ನಾಳೆ ಗಲ್ಲಿಗೇರೋದು ಪಕ್ಕಾ..!

ದೆಹಲಿ: 2012ರಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರ ಮೇಲೆ ರೇಪ್ ಮಾಡಿ, ಕೊಂದು ಹಾಕಿದ್ದ ಪಾಪಿಗಳು 8 ವರ್ಷಗಳ ಬಳಿಕ ಗಲ್ಲಿಗೇರೋದು ಪಕ್ಕಾ ಆಗಿದೆ. ಯಾಕಂದ್ರೆ ಗಲ್ಲು ಶಿಕ್ಷೆಗೆ ತಡೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ಪಟಿಯಾಲಾ ಹೌಸ್ ಕೋರ್ಟ್​ ತಿರಸ್ಕರಿಸಿದೆ. ನಾಳೆ ಬೆಳಗ್ಗೆ 7 ಗಂಟೆಗೆ ಪಾಪಿಗಳು ಗಲ್ಲಿಗೆ ಏರಲಿದ್ದು, ಈಗಾಗಲೇ ಈ ಬಗ್ಗೆ ಡೆತ್ ವಾರೆಂಟ್ ಜಾರಿಯಾಗಿದೆ. ಅಂದಹಾಗೆ ಇದು 3ನೇ ಬಾರಿಗೆ ಜಾರಿಯಾಗಿರುವ ಡೆತ್ ವಾರೆಂಟ್ ಆಗಿದೆ. ಈ ಹಿಂದೆ 2 ಬಾರಿ ಡೆತ್ ವಾರೆಂಟ್ ಜಾರಿಯಾಗಿದ್ದು, ಪಾಪಿಗಳು ಒಂದಲ್ಲಾ ಒಂದು ಅರ್ಜಿ ಸಲ್ಲಿಸಿ ಗಲ್ಲು ಶಿಕ್ಷೆಯನ್ನು ಮುಂದೂಡುವಂತೆ ಮಾಡಿದ್ದರು. ಆದ್ರೆ ಈ ಬಾರಿ ಕೋರ್ಟ್​ ಗಲ್ಲುಶಿಕ್ಷೆ ಮುಂದೂಡಲು ನಿರಾಕರಿಸಿದ್ದು, ಅರ್ಜಿ ವಜಾಗೊಳಿಸಿದೆ. ಈ ಮೂಲಕ ನಾಲ್ವರು ಆರೋಪಿಗಳಾದ ಪವನ್ ಕುಮಾರ್ ಗುಪ್ತಾ, ಮುಖೇಶ್ ಸಿಂಗ್, ಅಕ್ಷಯ್ ಕುಮಾರ್, ವಿನಯ್ ಶರ್ಮಾ ನಾಳೆ ಗಲ್ಲಿಗೇರೋದು ಬಹುತೇಕ ಪಕ್ಕಾ ಆಗಿದೆ.

Contact Us for Advertisement

Leave a Reply