ಪಾಕ್‌ನಲ್ಲೂ ಭಯಂಕರ ಇಂಧನ ಬಿಕ್ಕಟ್ಟು: 18 ಗಂಟೆ ಪವರ್ ಕಟ್‌

masthmagaa.com:

ಭಾರತದಂತೆ ಈಗ ಪಾಕಿಸ್ತಾನದಲ್ಲೂ ಕೂಡ ವಿದ್ಯುತ್‌ ಅಭಾವ ಉಂಟಾಗಿದೆ. ಪಾಕ್‌ನ ಕೆಲವು ಭಾಗಗಳಲ್ಲಿ 18 ಗಂಟೆಗಳ ಕಾಲ ವಿದ್ಯುತ್‌ ಇಲ್ದೆ ಜನ್ರು ಪರದಾಡಿದ್ದಾರೆ. ಪಾಕ್‌ನಲ್ಲಿನ ತೀವ್ರವಾದ ಇಂಧನ ಬಿಕ್ಕಟ್ಟು ದೀರ್ಘಕಾಲದ ವಿದ್ಯುತ್‌ ಕಡಿತವನ್ನ ಉಂಟುಮಾಡಿದೆ. ಹಾಗೂ ಸಣ್ಣ ವ್ಯಾಪಾರಿಗಳು ಅಧಿಕ ತಾಪಮಾನದಲ್ಲಿ ತಮ್ಮ ಕೆಲ್ಸ ಮಾಡಲು ಕಷ್ಟ ಪಡ್ತಿದಾರೆ. ಜೊತೆಗೆ ದೈನಂದಿನ ಜೀವನ ಮತ್ತು ವ್ಯವಹಾರಗಳನ್ನು ಅಡ್ಡಿಪಡಿಸ್ತಿದೆ ಅಂತ ಅಲ್ಲಿನ ಸ್ಥಳೀಯ ಮಾಧ್ಯಮಗಳು ತಿಳಿಸಿವೆ. ಇಂಧನ ಮತ್ತು ಅನಿಲಗಳ ಕೊರತೆ, ಉಷ್ಣ ಸ್ಥಾವರಗಳಿಂದ ವಿದ್ಯುತ್‌ ಉತ್ಪಾದನೆಯಲ್ಲಿನ ಕುಸಿತ, ಬೇಡಿಕೆ ಮತ್ತು ಪೂರೈಕೆಯ ಅಸಮತೋಲನಕ್ಕೆ ಕಾರಣವಾಗಿದೆ ಅಂತ ವರದಿಗಳು ತಿಳಿಸಿವೆ. ಸುಮಾರು 6000 ದಿಂದ 7000 MW ನಷ್ಟು ಕೊರತೆಯಿದೆ ಅಂತ ವರದಿಯಾಗಿದೆ.

-masthmagaa.com

Contact Us for Advertisement

Leave a Reply