ಬ್ರಿಟನ್ ಸಂಸದರಿಗೆ ಹೊಸ ರೂಲ್ಸ್​! ಏನು ಗೊತ್ತಾ?

masthmagaa.com:

ಬ್ರಿಟನ್ ಸಂಸದರಿಗೆ ಡ್ರೆಸ್ ಕೋಡ್​ ಜಾರಿ ಮಾಡಲಾಗಿದೆ. ಬೇಸಿಗೆ ರಜೆ ಮುಗಿದು ಇವತ್ತು ಸದನದಲ್ಲಿ ಕಲಾಪ ಶುರುವಾಗ್ತಿದೆ. ಇದ್ರ ನಡುವೆ ಸಂಸದರಿಗೆ ಡ್ರೆಸ್​ ಕೋಡ್ ಜಾರಿಗೊಳಿಸಲಾಗಿದೆ. ಸ್ಪೀಕರ್ ಸರ್ ಲಿಂಡ್ಸೆ ಹೋಯಲ್​​ ಬ್ರಿಟಿಷ್ ಸಂಸತ್​ನ ಕೆಳಮನೆಯಾದ ಹೌಸ್ ಆಫ್ ಕಾಮನ್ಸ್​ನ ನಿಯಮ ಮತ್ತು ನಡತೆಗೆ ಸಂಬಂಧಿಸಿದ ರೂಲ್ಸ್​ಗಳನ್ನು ಅಪ್​ಡೇಟ್ ಮಾಡಿದ್ದಾರೆ. ಅದ್ರಂತೆ ಇನ್ಮುಂದೆ ಸಂಸದರು ಜೀನ್ಸ್​ ಪ್ಯಾಂಟ್​, ಸ್ಫೋರ್ಟ್ಸ್​ ವಿಯರ್​, ಟೀ ಶರ್ಟ್​ ಅಥವಾ ಸ್ಲೀವ್​ಲೆಸ್ ಟಾಪ್ ಹಾಕ್ಕೊಂಡು ಸಂಸತ್ ಒಳಗೆ ಬರುವಂತಿಲ್ಲ. ಜೊತೆಗೆ ಸಂಸತ್​ನಲ್ಲಿ ಚಪ್ಪಾಳೆ ಕೂಡ ಹೊಡೆಯುವಂತಿಲ್ಲ. ಕ್ಯಾಶುವಲ್ ಶೂ ಹಾಕಂಗಿಲ್ಲ. ಸ್ಮಾರ್ಟ್​ ಅಥವಾ ಬ್ಯುಸಿನೆಸ್ ಶೂ ಹಾಕ್ಬೇಕು ಅಂತ ಸೂಚಿಸಲಾಗಿದೆ.

-masthmagaa.com

Contact Us for Advertisement

Leave a Reply