ಪಾಕ್‌ ಹುಡುಗಿ, ಭಾರತದ ಹುಡುಗ! ಈ ಅಂತಾರಾಷ್ಟ್ರೀಯ ಪ್ರೇಮಕಥೆಗೆ ಸಾಟಿಯೇ ಇಲ್ಲ!

masthmagaa.com:

ಆನ್‌ಲೈನ್‌ಗೇಮ್‌ನಲ್ಲಿ ಪರಿಚಯವಾಗಿ, ಬಳಿಕ ಅದು ಪ್ರೀತಿಗೆ ತಿರುಗಿ, ಆ ಪ್ರೀತಿಯ ಕಾರಣಕ್ಕೆ ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ಬಂದಿದ್ದ ಹುಡುಗಿಯನ್ನ ಪಾಕಿಸ್ತಾನಕ್ಕೆ ಹಸ್ತಾಂತರ ಮಾಡಲಾಗಿದೆ. ಪಂಜಾಬ್‌ನ ವಾಘಾ ಬಾರ್ಡರ್‌ನಲ್ಲಿ ಭಾರತೀಯ ಅಧಿಕಾರಿಗಳು ಪಾಕಿಸ್ತಾನದ ಅಧಿಕಾರಿಗಳಿಗೆ ಈಕೆಯನ್ನ ಹಸ್ತಾಂತರ ಮಾಡಿದಾರೆ. ಇದ್ರ ಬೆನ್ನಲ್ಲೇ ಆಕೆ ಭಾರತಕ್ಕೆ ಬಂದಿದ್ದೇಗೆ ಅನ್ನೋ ಈ ಅಂತಾರಾಷ್ಟ್ರೀಯ ಪ್ರೇಮ ವೃತ್ತಾಂತ ಎಳೆಎಳೆಯಾಗಿ ಬೆಳಕಿಗೆ ಬಂದಿದೆ. ಮೂಲತಃ ಪಾಕಿಸ್ತಾನದ ಸಿಂಧ್‌ ಪ್ರಾಂತ್ಯದವಳಾದ ಈ ಹುಡುಗಿಯ ಹೆಸರು ಇಕ್ರಾ ಜೀವಾನಿ. 16 ವರ್ಷ ವಯಸ್ಸು. ಲುಡೋ ಗೇಮ್‌ ಮೂಲಕ ಮುಲಾಯಂ ಸಿಂಗ್‌ ಯಾದವ್‌ ಅನ್ನೋ ಯುವಕನ ಜೊತೆಗೆ ಈಕೆಗೆ ಪರಿಚಯ ಆಗಿತ್ತು. ಈತ ಬೆಂಗಳೂರಿನಲ್ಲಿ ವಾಸವಿದ್ದ ಉತ್ತರ ಭಾರತ ಮೂಲದ ಯುವಕ. ಪಾಕಿಸ್ತಾನದಲ್ಲಿ ಕಾಲೇಜಿಗೆ ಹೋಗಿದ್ದ ಈಕೆ ಇದ್ದಕ್ಕಿಂದ್ದಂತೆ ಕಾಣೆಯಾಗಿದ್ಲು. ಈ ಸಂಬಂಧ ಅವರ ಕುಟುಂಬಸ್ಥರು ದೂರು ನೀಡಿದ್ರು. ಇನ್ನು ಈ ಕಡೆ ಇಕ್ರಾ ಜೀವಾನಿ ಭಾರತಕ್ಕೆ ಹೋಗೋಕೆ ಮನೆಯ ಚಿನ್ನವನ್ನ ತಗೊಂಡು ಅದನ್ನ ಮಾರಿದ್ಲು, ತನ್ನ ಗೆಳತಿಯರಿಂದ ಸ್ಪಲ್ಪ ಹಣ ತಗೊಂಡು ದುಬೈಗೆ ಟಿಕೆಟ್‌ ಬುಕ್‌ ಮಾಡಿದ್ದಾಳೆ. ದುಬೈನಿಂದ ಈಕೆ ನೇರವಾಗಿ ನೇಪಾಳದ ಕಠ್ಮಂಡುವಿಗೆ ಹೋಗಿದಾಳೆ. ತನ್ನನ್ನ ತಾನು ಮುಸ್ಲಿಂ ಸಾಪ್ಟೇವೇರ್‌ ಉದ್ಯೋಗಿ ಅಂತ ಮುಲಾಯಂ ಸಿಂಗ್‌ ಯಾದವ್‌ ಈ ಹುಡುಗಿಗೆ ಹೇಳಿದ್ದ ಅಂತ ಗೊತ್ತಾಗಿದ್ದು, ಇವರಿಬ್ರೂ ನೇಪಾಳದಲ್ಲೇ ಮದುವೆಯಾಗಿದ್ದಾರೆ. ಬಳಿಕ ಬಿಹಾರದ ಗಡಿ ಪ್ರವೇಶಿಸಿ ಪಾಟ್ನಾಗೆ ಬಂದಿದ್ದಾರೆ. ಅಲ್ಲಿಂದ ಬೆಂಗಳೂರಿಗೆ ಆಗಮಿಸಿ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಜುನ್ನಸಂದ್ರದಲ್ಲಿ ನೆಲೆಸಿದ್ದಾರೆ. ಬೆಂಗಳೂರಿಗೆ ಕರೆತಂದ ಪ್ರೇಯಸಿಯನ್ನ ಭಾರತದ ಪ್ರಜೆ ಅಂತ ಸಾಬೀತು ಪಡಿಸೋಕೆ, ಆಕೆಯ ಹೆಸರನ್ನ ರಾವಾ ಯಾದವ್‌ ಅಂತ ಈತ ಬದಲಿಸಿದ್ದ. ಅದೇ ಹೆಸರಿನಲ್ಲಿ ನಕಲಿ ಆಧಾರ್‌ ಕಾರ್ಡ್‌, ವೋಟರ್‌ ಐಡಿ ಕೊಡಿಸಿದ್ದಾನೆ. ಸೆಫ್ಟೆಂಬರ್‌ನಲ್ಲೇ ಈಕೆ ಭಾರತಕ್ಕೆ ಬಂದಿದ್ದು, ಜನವರಿಯಲ್ಲಿ ಪಾಕ್‌ನಲ್ಲಿರೊ ತನ್ನ ತಾಯಿಗೆ ಕರೆ ಮಾಡಿದ್ದಾಳೆ. ಈ ಮಾಹಿತಿಯನ್ನ ಸಂಗ್ರಹಿಸಿದ ಗುಪ್ತಚರ ಅಧಿಕಾರಿಗಳು ತನಿಖೆ ನಡೆಸಿದಾಗ ಈ ಅಂತಾರಾಷ್ಟ್ರೀಯ ಪ್ರೇಮ ಬೆಳಕಿಗೆ ಬಂದಿದೆ. ಕೂಡಲೇ ನಕಲಿ ಸಾಫ್ಟವೇರ್‌ ಉದ್ಯೋಗಿಯನ್ನ ಬಂಧಿಸಲಾಗಿದೆ. ಹುಡುಗಿ ಇಕ್ರಾ ಜೀವಾನಿಯನ್ನ ವಶಕ್ಕೆ ಪಡೆಯಲಾಗಿತ್ತು. ಕಳೆದ ಎರಡ್ಮೂರು ದಿನಗಳ ಹಿಂದೆ ಅಧಿಕಾರಿಗಳೂ ಅವರ ಕುಟುಂಬಸ್ಥರಿಗೆ ಒಪ್ಪಿಸಿದ್ದಾರೆ. ಇನ್ನು ಈ ಪ್ರಕರಣದ ಕುರಿತು ಈಗ ಮಾತನಾಡಿರುವ ಇಕ್ರಾ ಜೀವಾನಿ ಚಿಕ್ಕಪ್ಪ ಅಫ್ಜಲ್‌ ಜೀವಾನಿ, ಈ ಹುಡುಗಿ ತುಂಬಾ ನಾಚಿಕೆ ಸ್ವಭಾವದವಳು. ಅದ್ಹೇಗೆ ಪ್ರೀತಿ ಮಾಡಿ ಬೇರೆ ದೇಶಕ್ಕೆ ಹೋಗೋಕೆ ಧೈರ್ಯ ಮಾಡಿದ್ಲು ಅಂತ ನಮಗೆ ಇನ್ನೂ ಅರ್ಥ ಆಗ್ತಿಲ್ಲ ಅಂತ ಹೇಳಿದ್ದಾರೆ

-masthmagaa.com

Contact Us for Advertisement

Leave a Reply