ಆಗಸ್ಟ್​ 31ರ ಒಳಗೆ ಹೊರಬರೋಕೆ ಸಾಧ್ಯವಿಲ್ಲ: ಜೋ ಬೈಡೆನ್ ಘೋಷಣೆ

masthmagaa.com:

ಅಫ್ಘಾನಿಸ್ತಾನದಲ್ಲಿ ಕೋಲಾಹಲ ಆಗದೇ ಅಲ್ಲಿಂದ ಹೊರಗೆ ಬರಲು ಸಾಧ್ಯವೇ ಇರಲಿಲ್ಲ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹೇಳಿದ್ದಾರೆ. ಕೆಲವರು ಗಲಾಟೆ ಏನೂ ಆಗದೇ ಹಾಗೇ ಸ್ವಾತಂತ್ರ್ಯ ಪಡೆಯಬಹುದಿತ್ತು ಅಂತ ಹೇಳ್ತಾರೆ. ಆದ್ರೆ ಅದು ಹೇಗೆ ಅಂತ ಗೊತ್ತಿಲ್ಲ. ಅಫ್ಘಾನಿಸ್ತಾನದಲ್ಲಿ ಸಿಲುಕಿರೋರು ಮತ್ತು ಅವರ ರಕ್ಷಣೆಗೆ ತೆರಳಿರೋ ಯೋಧರನ್ನು ಆಗಸ್ಟ್ 31ರ ಒಳಗೆ ಅಲ್ಲಿಂದ ಸ್ಥಳಾಂತರ ಮಾಡ್ಬೋದು ಅಂತ ಅಂದುಕೊಂಡಿದ್ವಿ. ಆದ್ರೆ ಅದು ಸಾಧ್ಯವಿಲ್ಲ ಅಂತ ಅನ್ನಿಸ್ತಿದೆ. ಅಲ್ಲಿ ಅಮೆರಿಕದ ಪ್ರಜೆ ಉಳಿದಿದ್ರೆ, ನಾವು ಅಲ್ಲಿ ಹೆಚ್ಚು ಸಮಯ ಉಳಿಯಲೇಬೇಕಾಗುತ್ತೆ ಅಂತ ಹೇಳಿದ್ದಾರೆ. ತಾಲಿಬಾನಿಗಳು ನಾವು ಸುರಕ್ಷಿತವಾಗಿ ಹೊರಬರಲು ಅವಕಾಶ ನೀಡೋದಾಗಿ ಹೇಳಿದ್ದಾರೆ. ಆದ್ರೆ ಅಲ್ಲಿ ನಮಗೆ ಸಹಾಯ ಮಾಡಿದವರನ್ನು ಕರೆತರಲು ನಮಗೆ ಕಷ್ಟವಾಗ್ತಿದೆ ಅಂತ ಹೇಳಿದ್ದಾರೆ. ನಂತರ ಮಾತನಾಡಿದ ಡೆಪ್ಯುಟಿ ಸೆಕ್ರೆಟರಿ ಆಫ್ ಸ್ಟೇಟ್​​ ವೆಂಡಿ ಶೆರ್ಮನ್​, ತಾಲಿಬಾನಿಗಳು ಮೇಲ್ನೋಟಕ್ಕೆ ಸ್ಥಳಾಂತರಕ್ಕೆ ಎಲ್ಲಾ ರೀತಿಯ ನೆರವು ನೀಡೋದಾಗಿ ಹೇಳ್ತಿದ್ದಾರೆ. ಆದ್ರೆ ಮತ್ತೊಂದ್ಕಡೆ ಅದೇ ತಾಲಿಬಾನಿಗಳು, ಅಫ್ಘನ್ನರು ಏರ್​ಪೋರ್ಟ್​​​ಗೆ ಹೋಗದಂತೆ ತಡೆಯುತ್ತಿದ್ದಾರೆ ಅಂತ ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ರಕ್ಷಣಾ ಕಾರ್ಯದರ್ಶಿ ಲಾಯ್ಡ್​ ಆಸ್ಟಿನ್​​, ಸಾಧ್ಯವಾದಷ್ಟು ಬೇಗ ಅಲ್ಲಿರೋರನ್ನು ಸ್ಥಳಾಂತರಿಸೋ ಕೆಲಸ ಮಾಡ್ತೀವಿ. ಒಂದೇ ಸಲಕ್ಕೆ ಹೋಗಿ ದೊಡ್ಡ ಮಟ್ಟದಲ್ಲಿ ಜನರನ್ನು ಕರೆತರೋ ಸಾಮರ್ಥ್ಯ ನಮಗಿಲ್ಲ. ಈವರೆಗೆ 4800 ಮಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರ ಮಾಡಿದೀವಿ ಅಂತ ಹೇಳಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಪೆಂಟಗಾನ್​, ಅಮೆರಿಕ ತರಬೇತಿ ನೀಡಿದ ಅಫ್ಘಾನಿಸ್ತಾನ ಮಿಲಿಟರಿ ಮತ್ತು ಅಲ್ಲಿನ ಸರ್ಕಾರ ಇಷ್ಟು ಬೇಗ ಅಂದ್ರೆ ಹನ್ನೊಂದೇ ದಿನಗಳಲ್ಲಿ ಪತನವಾಗುತ್ತೆ ಅಂತ ಅಂದುಕೊಂಡಿರಲಿಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply