ಕೊರೋನಾ ಆತಂಕದಲ್ಲಿ ವಿಶ್ವ…ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ..!

masthmagaa.com:

ಇಡೀ ಜಗತ್ತಿಗೇ ಒಂದು ಚಿಂತೆಯಾದ್ರೆ ಈ ಉತ್ತರ ಕೊರಿಯಾಗೇ ಒಂದು ಚಿಂತೆ.. ವಿಶ್ವವೇ ಕೊರೋನಾಗೆ ಏನ್ಮಾಡೋದಪ್ಪಾ ಅಂತ ಟೆನ್ಶನ್​ನಲ್ಲಿದ್ರೆ ಉತ್ತರ ಕೊರಿಯಾ ಒಂದೇ ದಿನ ಎರಡೆರಡು ಕ್ಷಿಪಣಿ ಪರೀಕ್ಷೆ ನಡೆಸಿದೆ. ಉತ್ತರ ಪ್ಯೋಂಗನ್ ಪ್ರಾಂತ್ಯದಿಂದ ಪೂರ್ವ ಸಾಗರದಲ್ಲಿ ಈ ಪರೀಕ್ಷೆ ನಡೆಸಲಾಗಿದೆ.  ಇನ್ನು ಈ ತಿಂಗಳ ಆರಂಭದಲ್ಲಿ ‘ಫೈರಿಂಗ್ ಡ್ರಿಲ್’ ನ ಭಾಗವಾಗಿ ಹಲವಾರು ಕ್ಷಿಪಣಿಗಳನ್ನು ಪರೀಕ್ಷಿಸಿತ್ತು. ಈಗಾಗಲೇ ಪರಮಾಣು ಮತ್ತು ಕ್ಷಿಪಣಿ ಪರೀಕ್ಷೆಗಳನ್ನು ಕೊನೆಗೊಳಿಸಿ, ಮಾತುಕತೆಗಳಿಗೆ ಮರಳುವಂತೆ ಅಮೆರಿಕಾ ಮತ್ತು ಚೀನಾ ಉತ್ತರ ಕೊರಿಯಾಗೆ ಕರೆ ನೀಡಿವೆ. ಆದ್ರೂ ಕೂಡ ಉತ್ತರ ಕೊರಿಯಾ ತನ್ನ ಮೊಂಡುಬುದ್ಧಿಯನ್ನು ಬಿಡ್ತಿಲ್ಲ.

-masthmagaa.com

Contact Us for Advertisement

Leave a Reply