ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ! ಅಮೆರಿಕಗೆ ಟೆನ್ಶನ್​?

masthmagaa.com:

ಕಳೆದ ವಾರಾಂತ್ಯದಲ್ಲಿ ಉತ್ತರ ಕೊರಿಯಾ ಕಡಿಮೆ ರೇಂಜ್​​​​ನ ಕ್ಷಿಪಣಿ ಪರೀಕ್ಷೆ ನಡೆಸಿದೆ. ಇದಕ್ಕೂ ಕೆಲ ದಿನಗಳ ಮುನ್ನವಷ್ಟೇ ದಕ್ಷಿಣ ಕೊರಿಯಾ ಮತ್ತು ಅಮೆರಿಕ ಒಟ್ಟಾಗಿ ಮಿಲಿಟರಿ ಸಮರಾಭ್ಯಾಸ ನಡೆಸೋದಕ್ಕೆ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಸಹೋದರಿ ವಿರೋಧ ವ್ಯಕ್ತಪಡಿಸಿದ್ರು. ಅದ್ರ ಬೆನ್ನಲ್ಲೇ ಈ ಕ್ಷಿಪಣಿ ಪರೀಕ್ಷೆ ನಡೆಸಲಾಗಿದೆ ಅಂತ ಬೈಡೆನ್ ಆಡಳಿತದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಚೀನಾ ಜೊತೆಗಿನ ಸಭೆಯಲ್ಲಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟೋನಿ ಬ್ಲಿಂಕನ್, ಉತ್ತರ ಕೊರಿಯಾ ಪರಮಾಣು ಯೋಜನೆಯನ್ನು ನಿಲ್ಲಿಸುವಂತೆ ಚೀನಾ ಒತ್ತಡ ಹೇರಬೇಕೆಂದು ಒತ್ತಾಯಿಸಿದ್ರು.

ಅದೇ ರೀತಿ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಕೂಡ ಏಷ್ಯಾದ ಹಲವು ದೇಶಗಳಿಗೆ ಭೇಟಿ ನೀಡಿ, ಉತ್ತರ ಕೊರಿಯಾ ಸೇರಿದಂತೆ ಪ್ರಾದೇಶಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ರು. ಅದಕ್ಕೆ ಈಗ ಉತ್ತರ ಕೊರಿಯಾ ಕ್ಷಿಪಣಿ ಪರೀಕ್ಷೆ ನಡೆಸಿಯೇ ಉತ್ತರ ಕೊಟ್ಟಿದೆ. ಈ ಹಿಂದೆ ಟ್ರಂಪ್ ಅವಧಿಯಲ್ಲಿ ಕಿಮ್ ಜಾಂಗ್ ಉನ್ ಜೊತೆ ಮೂರ್ಮೂರು ಭಾರಿ ಭೇಟಿಯಾಗಿ, ಮಾತುಕತೆ ನಡೆಸಿದ್ರು. ಆದ್ರೆ ಆರಂಭದಲ್ಲಿ ಉಭಯದೇಶಗಳ ನಡುವೆ ಸಂಬಂಧ ಸುಧಾರಿಸ್ತಿದೆ ಅಂತನ್ನಿಸಿದ್ರೂ ನಂತರದಲ್ಲಿ ಮತ್ತೆ ಸಂಬಂಧ ಹದಗೆಟ್ಟಿತು. ಈಗ ಜೋ ಬೈಡೆನ್ ಆಡಳಿತ ಫೆಬ್ರುವರಿಯಿಂದಲೂ ಮಾತುಕತೆಗೆ ಆಹ್ವಾನಿಸ್ತಿದ್ರೂ ಉತ್ತರ ಕೊರಿಯಾ ನಿರಾಕರಿಸುತ್ತಲೇ ಬಂದಿದೆ.

-masthmagaa.com

 

Contact Us for Advertisement

Leave a Reply