ಲಸಿಕೆ ಹಾಕಿಸ್ಕೊಳ್ಳಿ.. ಬೀರ್ ಕುಡೀರಿ: ಜೋ ಬೈಡೆನ್ ಹೊಸ ಆಫರ್!

masthmagaa.com:

ಬಿಯರ್ ಕುಡೀರಿ, ಕಟ್ಟಿಂಗ್ ಮಾಡಿಸ್ಕೊಳ್ಳಿ ಮತ್ತು ಕೊರೋನಾ ಲಸಿಕೆ ಹಾಕಿಸಿಕೊಳ್ಳಿ ಅಂತ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಕರೆ ಕೊಟ್ಟಿದ್ಧಾರೆ. ಜುಲೈ 4ರ ರಾಷ್ಟ್ರೀಯ ದಿನಾಚರಣೆ ಒಳಗಾಗಿ 70 ಪರ್ಸೆಂಟ್ ಜನರಿಗೆ ಲಸಿಕೆ ಹಾಕೋ ಗುರಿ ಹೊಂದಿರೋದ್ರಿಂದ ಈ ರೀತಿ ಪ್ರೋತ್ಸಾಹ ನೀಡಲಾಗ್ತಿದೆ. ಒಂದ್ವೇಳೆ ನಮ್ಮ ಗುರಿ ನಾವು ತಲುಪಿದ್ರೆ ಕೊರೋನಾದಿಂದ ಸ್ವಾತಂತ್ರ್ಯ ಘೋಷಿಸಿಕೊಳ್ಳಬಹುದು. ಎಲ್ಲರು ಇದಕ್ಕೆ ಬೆಂಬಲಿಸಬೇಕು ಅಂತ ಕರೆಕೊಟ್ಟಿದ್ದಾರೆ. ಇನ್ನು ಅಮೆರಿಕ 8 ಕೋಟಿ ಡೋಸ್ ಲಸಿಕೆಯನ್ನು ವಿಶ್ವದ ಬೇರೆ ಬೇರೆ ದೇಶಗಳಿಗೆ ಪೂರೈಸಲಿದ್ದು, ಈ ಬಗ್ಗೆ ಕೆಲವೇ ದಿನಗಳಲ್ಲಿ ಜೋ ಬೈಡೆನ್ ಕಂಪ್ಲೀಟ್ ಡೀಟೇಲ್ಸ್ ನೀಡ್ತಾರೆ.. ಕೋವಾಕ್ಸ್ ಕಾರ್ಯಕ್ರಮದ ಅಡಿಯಲ್ಲಿ ಯಾವುದೇ ರಾಜಕೀಯವಿಲ್ಲದೇ ಈ ಲಸಿಕೆಗಳ ವಿತರಣೆ ಮಾಡಲಾಗುತ್ತೆ ಅಮೆರಿಕ ಸೆಕ್ರೆಟರಿ ಆಫ್ ಸ್ಟೇಟ್ ಅಂಟೋನಿ ಬ್ಲಿಂಕನ್ ಹೇಳಿದ್ದಾರೆ. ಇನ್ನು ರಷ್ಯಾ ಅಭಿವೃದ್ಧಿಪಡಿಸಿರೋ ಸ್ಪುಟ್ನಿಕ್ ವಿ ಲಸಿಕೆ ವಯಸ್ಕರಲ್ಲಿ 78.6ರಿಂದ 83.7 ಪರ್ಸೆಂಟ್​​ನಷ್ಟು ಪರಿಣಾಮಕಾರಿ ಅಂತ ರಷ್ಯಾ ಡೈರೆಕ್ಟ್ ಇನ್ವೆಸ್ಟ್​ಮೆಂಟ್ ಫಂಡ್ ತಿಳಿಸಿದೆ.

-masthmagaa.com

Contact Us for Advertisement

Leave a Reply