7 ತಿಂಗಳ ಬಳಿಕ ಒಮರ್ ಅಬ್ದುಲ್ಲಾಗೆ ಬಿಡುಗಡೆ ಭಾಗ್ಯ

masthmagaa.com:

ಜಮ್ಮು ಕಾಶ್ಮೀರ ಮಾಜಿ ಸಿಎಂ ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸುವಂತೆ ಜಮ್ಮು ಕಾಶ್ಮೀರ ಆಡಳಿತ ಆದೇಶಿಸಿದೆ. ಕಳೆದ ವಾರವಷ್ಟೇ ಅವರ ತಂದೆ ಫಾರೂಖ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಲಾಗಿತ್ತು. ಇದೀಗ 7 ತಿಂಗಳ ಗೃಹಬಂಧನದ ಬಳಿಕ ಒಮರ್ ಅಬ್ದುಲ್ಲಾ ಅವರನ್ನೂ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಜಮ್ಮು ಕಾಶ್ಮೀರ ಆಡಳಿತ ಒಮರ್ ಅಬ್ದುಲ್ಲಾ ಅವರನ್ನು ಬಿಡುಗಡೆಗೊಳಿಸಬೇಕೆಂದು ಆದೇಶ ಹೊರಡಿಸಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿದ್ದಾರೆ.

ಆಗಸ್ಟ್​ 5ರಂದು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ವೇಳೆ ಒಮರ್ ಅಬ್ದುಲ್ಲಾರನ್ನು ವಶಕ್ಕೆ ಪಡೆಯಲಾಗಿತ್ತು. ಆದ್ರೆ ಮಾಜಿ ಸಿಎಂ, ಪಿಡಿಪಿ ನಾಯಕಿ ಮೆಹಬೂಬ ಮುಫ್ತಿಯವರ ಗೃಹಬಂಧನ ಇನ್ನೂ ಮುಂದುವರಿದಿದೆ.

-masthmagaa.com

Contact Us for Advertisement

Leave a Reply