ವಿಶ್ವದೆಲ್ಲೆಡೆ ಒಮೈಕ್ರಾನ್ ಆತಂಕ! ಅಪ್​ಡೇಟ್ ಇಲ್ಲಿದೆ ನೋಡಿ..

masthmagaa.com:

ಒಂದ್ಕಡೆ ಒಮೈಕ್ರಾನ್ ಭೀತಿ ಎದುರಾಗಿದ್ರೆ, ಮತ್ತೊಂದ್ಕಡೆ ಯೂರೋಪ್​​ನಲ್ಲಿ ನಿರಂತರವಾಗಿ ಕೊರೋನಾ ಜಾಸ್ತಿಯಾಗ್ತಿದೆ. ಅದ್ರಲ್ಲೂ ಯುನೈಟೆಡ್ ಕಿಂಗ್​ಡಮ್​​ನಲ್ಲಂತೂ ಕೊರೋನಾ ಸ್ಫೋಟವಾದ ಬಳಿಕ ಇದೇ ಮೊದಲ ಬಾರಿಗೆ ಹೊಸ ಹೊಸ ದಾಖಲೆಗಳನ್ನ ಬರೀತಾ ಇದೆ. ಮೊನ್ನೆ 78 ಸಾವಿರ ಪ್ರಕರಣಗಳೊಂದಿಗೆ ದಾಖಲೆ ಬರೆದಿದ್ದ ಕೊರೋನಾ, ಇನ್ನೆ ಒಂದೇ ದಿನ 88 ಸಾವಿರ ಪ್ರಕರಣಗಳೊಂದಿಗೆ ಮತ್ತೊಂದು ದಾಖಲೆ ಬರೆದಿದೆ. 143 ಮಂದಿ ಪ್ರಾಣ ಕೂಡ ಬಿಟ್ಟಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರೋ ಜಿ7 ಒಕ್ಕೂಟ, ಸದ್ಯ ಜಾಗತಿಕ ಆರೋಗ್ಯದ ಮೇಲೆ ಅತಿದೊಡ್ಡ ಅಪಾಯ ಅಂದ್ರೆ ಅದು ಒಮೈಕ್ರಾನ್ ಅಂತ ಹೇಳಿದೆ. ಇದ್ರ ವಿರುದ್ಧ ಹೋರಾಟದಲ್ಲಿ ಪರಸ್ಪರ ಸಹಕಾರ ಇರಬೇಕು. ಒಮೈಕ್ರಾನ್ ಡೇಟಾ ಮೇಲ್ವಿಚಾರಣೆ, ಹಂಚಿಕೊಳ್ಳೋದು ತುಂಬಾ ಮುಖ್ಯ ಅಂತ ಕೂಡ ತಿಳಿಸಿದೆ.

ಅಮೆರಿಕದಲ್ಲೂ ಒಮೈಕ್ರಾನ್ ತುಂಬಾ ವೇಗವಾಗಿ ಹರಡಬಹುದು.. ಹೀಗಾಗಿ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಅಂತ ಅಧ್ಯಕ್ಷ ಜೋ ಬೈಡೆನ್ ಎಚ್ಚರಿಸಿದ್ದಾರೆ. ಈ ಚಳಿಗಾಲ ಲಸಿಕೆ ಹಾಕಿಸಿಕೊಳ್ಳದವರಿಗೆ ತುಂಬಾ ಅನಾರೋಗ್ಯ ಮತ್ತು ಸಾವಿನಿಂದ ಕೂಡಿರಬಹುದು.. ಲಸಿಕೆಯಿಂದ ಮಾತ್ರ ರಕ್ಷಣೆ ಪಡೆಯಲು ಸಾಧ್ಯ ಅಂತ ಕೂಡ ಹೇಳಿದ್ದಾರೆ.

ಒಮೈಕ್ರಾನ್ ಹಾವಳಿ ಶುರುವಾಗ್ತಿದ್ದಂತೆ ಯಾವ ಲಸಿಕೆ ಒಮೈಕ್ರಾನ್ ತಡೆಯುತ್ತೆ ಅನ್ನೋ ಚರ್ಚೆ ಜೋರಾಗಿದೆ. ಇನ್ನು ಚೀನಾದ ಸಿನೋವ್ಯಾಕ್​ ಲಸಿಕೆ ಒಮೈಕ್ರಾನ್ ತಡೆಯುವಲ್ಲಿ 94 ಪರ್ಸೆಂಟ್ ಪರಿಣಾಮಕಾರಿ ಅಂತ ಸಂಸ್ಥೆ ಹೇಳಿಕೊಂಡಿದೆ.

-masthmagaa.com

Contact Us for Advertisement

Leave a Reply