ಒಮೈಕ್ರಾನ್ ಬಗ್ಗೆ ಈ ದಿನದ ಅಪ್‌ಡೇಟ್ ಇಲ್ಲಿದೆ

masthmagaa.com:
ವಿದೇಶದಿಂದ ಹೈದ್ರಾಬಾದ್​ಗೆ ಬಂದಿದ್ದ ಇಬ್ಬರಿಗೆ ಒಮೈಕ್ರಾನ್​ ರೂಪಾಂತರಿ ದೃಢಫಟ್ಟಿದೆ ಅಂತ ತೆಲಂಗಾಣ ಆರೋಗ್ಯ ಇಲಾಖೆ ಹೇಳಿದೆ. ಸೊಮಾಲಿಯಾದಿಂದ ಬಂದ ಪುರುಷ ಮತ್ತು ಕೀನ್ಯಾದಿಂದ ಬಂದ ಮಹಿಳೆಗೆ ಹೊಸ ತಳಿ ಅಂಟಿದೆ. ಇವೆರೆಡು ಕೂಡ ಕೇಂದ್ರ ಸರ್ಕಾರದ ಹೈ ರಿಸ್ಕ್​ ದೇಶಗಳ ಪಟ್ಟಿಯಲ್ಲಿಲ್ಲ. ಇವರಿಬ್ರು ದುಬೈ ಮೂಲಕ ಹೈದ್ರಾಬಾದ್​ಗೆ ಬಂದಿದ್ರು. ಅತ್ತ ಅಬುಧಾಬಿಯಿಂದ ಹೈದ್ರಾಬಾದ್​ ಮೂಲಕ ಪಶ್ಚಿಮ ಬಂಗಾಳಕ್ಕೆ ಬಂದಿದ್ದ 7 ವರ್ಷದ ಮಗುವಿಗೆ ಒಮೈಕ್ರಾನ್​ ದೃಢಪಟ್ಟಿದೆ. ಮಗುವಿನ ಪೋಷಕರಿಗೆ ಕೊರೋನಾ ಪರೀಕ್ಷೆ ಮಾಡಿದಾಗ ಅವರಿಗೆ ನೆಗೆಟಿವ್ ಬಂದಿದೆ. ಒಮೈಕ್ರಾನ್​ ಬಗ್ಗೆ ಮಾತನಾಡಿರೋ ಕರ್ನಾಟಕ ಆರೋಗ್ಯ ಸಚಿವ ಡಾ.ಕೆ. ಸುಧಾಕರ್​, ಒಮೈಕ್ರಾನ್​ ತುಂಬಾ ವೇಗವಾಗಿ ಹರಡುವ ಸಾಮರ್ಥ್ಯ ಹೊಂದಿದೆ. ಮಾಸ್ಕ್​ ಧರಿಸೋದು, ಸಾಮಾಜಿ ಅಂತರ ಕಾಪಾಡೋದನ್ನ ಮರೀಬಾರ್ದು. ದುರಾದೃಷ್ಟ ಅಂದ್ರೆ ಜನ ಮಾಸ್ಕ್​ ಧರಿಸುತ್ತಿಲ್ಲ. ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತೆ ಎಂದಿದ್ದಾರೆ.
-masthmagaa.com

Contact Us for Advertisement

Leave a Reply