ಒಮೈಕ್ರಾನ್​​ ಬಗ್ಗೆ ಶಾಕಿಂಗ್ ಮಾಹಿತಿ ನೀಡಿದ WHO!

masthmagaa.com:

ಮೂಲ ಒಮೈಕ್ರಾನ್​​ಗಿಂತ ಅದ್ರ ಉಪ ತಳಿ ಅಂದ್ರೆ ಸಬ್​​ವೇರಿಯಂಟ್ ಬಿಎ.2 ತುಂಬಾ ಹರಡೋ ಸಾಮರ್ಥ್ಯ ಹೊಂದಿದೆ ಅಂತ ನಿನ್ನೆಯಷ್ಟೇ ಡೆನ್ಮಾರ್ಕ್​​ ವಿವಿಯ ಅಧ್ಯಯನವೊಂದು ಹೇಳಿತ್ತು. ಅದ್ರ ಬೆನ್ನಲ್ಲೇ ಈಗ ವಿಶ್ವ ಆರೋಗ್ಯ ಸಂಸ್ಥೆ ಕೂಡ ಅದೇ ಮಾತನ್ನು ಹೇಳಿದೆ. ಒಮೈಕ್ರಾನ್ ಉಪತಳಿ ಈಗಾಗಲೇ 57ಕ್ಕೂ ಹೆಚ್ಚು ದೇಶಗಳಲ್ಲಿ ಪತ್ತೆಯಾಗಿದೆ. ಕಳೆದ ತಿಂಗಳಲ್ಲಿ ಪತ್ತೆಯಾದ ಕೊರೋನಾ ಪ್ರಕರಣಗಳ ಪೈಕಿ 93 ಪರ್ಸೆಂಟ್​ನಷ್ಟು ಒಮೈಕ್ರಾನ್ ಇದ್ದು, ಅದ್ರಲ್ಲಿ ಬಿಎ1, ಬಿಎ11, ಬಿಎ2 ಮತ್ತ ಬಿಎ3 ರೂಪಾಂತರಿ ಇವೆ. ಇದ್ರಲ್ಲಿ ಬಿಎ1 ಮತ್ತು ಬಿಎ11 ಮೂಲ ಒಮೈಕ್ರಾನೇ ಆಗಿದೆ. ಉಳಿದಂತೆ ಬಿಎ2 ಮೂಲ ಒಮೈಕ್ರಾನ್​ಗಿಂತ ದೊಡ್ಡಮಟ್ಟದಲ್ಲಿ ರೂಪಾಂತರಗಳನ್ನು ಹೊಂದಿದೆ. ಹೆಚ್ಚು ಹರಡೋ ಸಾಮರ್ಥ್ಯವನ್ನು ಕೂಡ ಹೊಂದಿದೆ ಅಂತ ವಿಶ್ವ ಆರೋಗ್ಯ ಸಂಸ್ಥೆ ತನ್ನ ವಾರದ ಹೆಲ್ತ್ ಬುಲೆಟಿನ್​​ನಲ್ಲಿ ಹೇಳಿದೆ.

ಜೊತೆಗೆ ಒಮೈಕ್ರಾನ್ ಪತ್ತೆಯಾದ ಬಳಿಕ ಅಂದ್ರೆ 70 ದಿನಗಳಲ್ಲಿ 9 ಕೋಟಿಗೂ ಅಧಿಕ ಜನರಿಗೆ ಹರಡಿದೆ. 2020ರಲ್ಲಿ ಅಂದ್ರೆ ಕೊರೋನಾ ಶುರುವಾದ ವರ್ಷಕ್ಕಿಂತಲೂ ಇದು ಜಾಸ್ತಿ ಅಂತ ಕೂಡ ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಕೊರೋನಾ ವಿರುದ್ಧ ಈಗಲೇ ಗೆಲುವು ಘೋಷಿಸಿಕೊಳ್ಳೋದು ಅಥವಾ ತಡೆಗಟ್ಟುವ ಪ್ರಯತ್ನ ಮಾಡದೇ ಕೈಚೆಲ್ಲಿ ಕೂತ್ರೆ ತುಂಬಾ ಆತುರದಲ್ಲಿ ನಿರ್ಧಾರ ತಗೊಂಡಂಗೆ ಆಗುತ್ತೆ ಅಂತ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಹೇಳಿದ್ದಾರೆ.

ಸದ್ಯದಲ್ಲಿಯೇ ‌ವ್ಯಾಕ್ಸಿನ್‌ ತಯಾರಕ ಸಂಸ್ಥೆಗಳಾದ ಫೈಜರ್‌ ಮತ್ತು ಬಿಯಾನ್​ಟೆಕ್ 5 ವರ್ಷ ವಯಸ್ಸಿಗಿಂತ ಕೆಳಗಿನ ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡಲು ಬೈಡನ್‌ ಸರ್ಕಾರದ ಅನುಮತಿ ಕೇಳಲಿವೆ. ಅಮೆರಿಕದಲ್ಲಿ ಓಮಿಕ್ರಾನ್‌ ಜಾಸ್ತಿಯಾದಂತೆ ಕೊರೋನಾ ಬಂದು ಆಸ್ಪತ್ರೆಗೆ ದಾಖಲಾಗುತ್ತಿರುವ ಮಕ್ಕಳ ಸಂಖ್ಯೆ ಕೂಡ ಹೆಚ್ಚಿದೆ. ಈ ಬೆನ್ನಲ್ಲೇ ವ್ಯಾಕ್ಸಿನ್‌ ಕಂಪನಿಗಳು ಈ ನಿರ್ಧಾರಕ್ಕೆ ಬಂದಿವೆ. ಕಳೆದ ತಿಂಗಳು ಅಮೆರಿಕದ ಆಹಾರ ಮತ್ತು ಔಷಧ ಪ್ರಾಧಿಕಾರ 12 ವರ್ಷ ವಯಸ್ಸಿನ ಮಕ್ಕಳಿಗೆ ಕೊರೋನಾ ಲಸಿಕೆ ನೀಡಲು ಅನುಮತಿ ಸೂಚಿಸಿತ್ತು.

-masthmagaa.com

Contact Us for Advertisement

Leave a Reply