ಸುಪ್ರೀಂಕೋರ್ಟ್ ಅಂಗಳದಲ್ಲಿ ಬಾಂಬೆ ಹೈಕೋರ್ಟ್​​ನ ಸ್ಕಿನ್ ಟು ಸ್ಕಿನ್ ಟಚ್ ತೀರ್ಪು!

masthmagaa.com:

ಬಾಂಬೆ ಹೈಕೋರ್ಟ್​ ಸ್ಕಿನ್ ಟು ಸ್ಕಿನ್ ಟಚ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿ ಇವತ್ತು ವಿಚಾರಣೆಗೆ ಬಂತು. ಜನವರಿ 19ರಂದು ಬಾಂಬೆ ಹೈಕೋರ್ಟ್​, ಸ್ಕಿನ್ ಟು ಸ್ಕಿನ್ ಟಚ್ ಆದ್ರೆ ಮಾತ್ರ ಪೋಸ್ಕೋ ಕಾಯ್ದೆಯಡಿ ಶಿಕ್ಷಾರ್ಹ ಅಪರಾಧ. ಬಟ್ಟೆ ಮೇಲಿಂದಲೇ ಮುಟ್ಟಿದ್ರೆ ಅದು ಲೈಂಗಿಕ ದೌರ್ಜನ್ಯ ಆಗಲ್ಲ ಅಂತ ತೀರ್ಪು ನೀಡಿತ್ತು. 12 ವರ್ಷದ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 39 ವರ್ಷದ ವ್ಯಕ್ತಿಯನ್ನು ಪೋಸ್ಕೋ ಕಾಯ್ದೆಯಿಂದ ಆರೋಪಮುಕ್ತಗೊಳಿಸಿತ್ತು. ಅದ್ರೆ ಮಹಿಳೆಯ ಘನತೆಗೆ ಧಕ್ಕೆ ಮಾಡಿದ ಪ್ರಕರಣದಲ್ಲಿ ಆತ ಅಪರಾಧಿ ಅಂತ ಘೋಷಿಸಿತ್ತು. ಆದ್ರೆ ಇದನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್​​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ರು. ಇವತ್ತು ವಿಚಾರಣೆ ವೇಳೆ ಮಾತನಾಡಿದ ಕೆಕೆ ವೇಣುಗೋಪಾಲ್​​, ಈ ತೀರ್ಪಿನ ಪ್ರಕಾರ ಯಾವುದೇ ವ್ಯಕ್ತಿ ಕೈಗೆ ಗ್ಲೌಸ್ ಹಾಕಿಕೊಂಡು, ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆರಾಮಾಗಿ ಎಸ್ಕೇಪ್ ಆಗಬಹುದು. ಇದು ಸಮಾಜಕ್ಕೆ ಅಪಾಯಕಾರಿ ಸಂದೇಶವನ್ನು ನೀಡುತ್ತೆ ಅಂತ ವಾದಿಸಿದ್ರು. ಆದ್ರೆ ಆರೋಪಿ ಪರ ವಾದಿಸಲು ವಕೀಲರು ಬಂದಿರಲಿಲ್ಲ. ಹೀಗಾಗಿ ವಕೀಲರ ಪರವಾಗಿ ವಾದಿಸಲು ವಕೀಲರನ್ನು ನಿಯೋಜಿಸುವಂತೆ ಸೂಚಿಸಿ, ಕೋರ್ಟ್​ ಅರ್ಜಿ ವಿಚಾರಣೆ ಮುಂದೂಡಿದೆ.

-masthmagaa.com

Contact Us for Advertisement

Leave a Reply