ಅಫ್ಘಾನಿಸ್ತಾನದಲ್ಲಿ ತಾಲಿಬಾನ್ Vs IS ಭೀಕರ ಕಾಳಗ!

masthmagaa.com:

ತಾಲಿಬಾನಿಗಳು ಅಧಿಕಾರಕ್ಕೆ ಬಂದ್ಮೇಲೆ ಐಎಸ್ ಉಗ್ರರು ಫುಲ್ ಚಿಗುರಿಕೊಂಡಿದ್ದಾರೆ. ಕಂಡ್ ಕಂಡಲ್ಲಿ ತಾಲಿಬಾನಿಗಳನ್ನೇ ಟಾರ್ಗೆಟ್ ಮಾಡ್ತಿದ್ದಾರೆ. ದಾಳಿಗಳು ನಿರಂತರವಾಗಿ ಹೆಚ್ಚಿದ ಬಳಿಕ ತಾಲಿಬಾನಿಗಳು ಕೂಡ ಅದೇ ದಾರಿ ಹಿಡಿದಿದ್ದಾರೆ ಅಂತ ಹೇಳಲಾಗ್ತಿದೆ. ಯಾಕಂದ್ರೆ ಐಎಸ್ ಉಗ್ರರ ಶಕ್ತಿಕೇಂದ್ರವಾದ ನಂಗರ್​​​ಹಾರ್ ಪ್ರಾಂತ್ಯದಲ್ಲಿ ಕಾಲುವೆ, ನದಿಗಳಲ್ಲಿ ಐಎಸ್ ಉಗ್ರರ ಹೆಣಗಳು ತೇಲುತ್ತಾ ಪತ್ತೆಯಾಗ್ತಿವೆ. ತಾಲಿಬಾನಿಗಳೇ ತಮ್ಮ ಶತ್ರುಗಳನ್ನು ರಹಸ್ಯವಾಗಿ ಹತ್ಯೆ ಮಾಡಿ, ಈ ರೀತಿ ಪರೋಕ್ಷವಾಗಿ ವಾರ್ನಿಂಗ್ ಕೊಡ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಈ ಪ್ರಾಂತ್ಯದಲ್ಲಿ ಇತ್ತೀಚಿನ ದಿನಗಳಲ್ಲಿ 150ಕ್ಕೂ ಹೆಚ್ಚು ಮೃತದೇಹಗಳು ಪತ್ತೆಯಾಗಿವೆ. ಇದೆಲ್ಲಾ ತಾಲಿಬಾನಿಗಳದ್ದೇ ಕೆಲಸ ಅನ್ನೋದು ಆರೋಪ.. ಅಂದಹಾಗೆ ಇಡೀ ಅಫ್ಘಾನಿಸ್ತಾನದಲ್ಲಿ 80 ಸಾವಿರ ತಾಲಿಬಾನಿ ಪೈಟರ್ಸ್ ಇದ್ರೆ, 2ರಿಂದ 4 ಸಾವಿರದಷ್ಟು ಈ ಐಎಸ್ ಉಗ್ರರಿದ್ದಾರೆ ಅಂತ ಅಂದಾಜಿಸಲಾಗಿದೆ. 2020ರಲ್ಲಿ ಅಮೆರಿಕ ಮತ್ತು ತಾಲಿಬಾನ್ ನಡುವೆ ಡೀಲ್ ಆಗ್ತಿದ್ದಂತೆ ಐಎಸ್ ಬಲಗೊಳ್ಳಲು ಶುರುವಾಯ್ತು. ಅದ್ರಲ್ಲೂ ತಾಲಿಬಾನ್ ಅಧಿಕಾರಕ್ಕೆ ಬಂದ್ಮೇಲೆ ಜೈಲಿನಲ್ಲಿದ್ದ ನೂರಾರು ಐಎಸ್ ಉಗ್ರರನ್ನು ಬಿಡುಗಡೆ ಮಾಡಲಾಯ್ತು. ಇದಾದ ಬಳಿಕ ಐಎಸ್ ಉಗ್ರರು ಸ್ಟ್ರಾಂಗ್ ಆಗ್ತಾ ಸಾಗಿದ್ರು. ಐಎಸ್ ಉಗ್ರರು ಮತ್ತು ತಾಲಿಬಾನಿಗಳ ಚಿಂತನೆಯಲ್ಲಿ ತುಂಬಾ ವ್ಯತ್ಯಾಸ ಇದೆ. ತಾಲಿಬಾನಿಗಳು ಅಫ್ಘಾನಿಸ್ತಾನದಿಂದ ವಿದೇಶಿಯರನ್ನು ಓಡಿಸಿ ತಮ್ಮ ಸರ್ಕಾರ ಸ್ಥಾಪಿಸಲು ಯತ್ನಿಸಿದ್ರೆ, ಐಎಸ್ ಉಗ್ರರು ಟರ್ಕಿಯಿಂದ ಪಾಕಿಸ್ತಾನದವರೆಗೆ ಕ್ಯಾಲಿಫೇಟ್​​ ಅಂದ್ರೆ ಇಸ್ಲಾಮಿಕ್ ಸಾಮ್ರಾಜ್ಯ ಸ್ಥಾಪಿಸೋ ಗುರಿ ಹೊಂದಿದ್ದಾರೆ. ಹೀಗಾಗಿ ಐಎಸ್ ಉಗ್ರರು ಹಾವಳಿ ಶುರು ಮಾಡಿದ್ದು, ತಾಲಿಬಾನಿಗಳು ಈಗ ಐಎಸ್​ನ್ನು ಮಟ್ಟಹಾಕಲು ಪ್ರಯತ್ನ ಪಡ್ತಿದ್ದಾರೆ. ಐಎಸ್ ಉಗ್ರರ ಪವರ್ ಸ್ಟೇಷನ್ ಆಗಿರೋ ನಂಗರ್​ಹಾರ್​​​ ಪ್ರಾಂತ್ಯದ ತಾಲಿಬಾನ್​​ ಇಂಟೆಲಿಜೆನ್ಸ್​​​ ಹೆಡ್ ಹೇಳೋ ಪ್ರಕಾರ ಐಎಸ್ ಇಲ್ಲವೇ ಇಲ್ಲ.. ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೋ ತಾಲಿಬಾನ್ ಸ್ಥಳೀಯ ಫೈಟರ್​​ಗಳು, ವಾರಕ್ಕೊಮ್ಮೆಯಾದ್ರೂ ಐಎಸ್ ಉಗ್ರರ ದಾಳಿ ಫಿಕ್ಸ್ ಆಗಿರುತ್ತೆ. ಹೀಗಾಗಿ ನಾವು ಯಾವಾಗಲೂ ಹೈ ಅಲರ್ಟ್​ ಆಗಿ ಇರ್ತೀವಿ. ಆಟೋ ರಿಕ್ಷಾದಲ್ಲಿ ಬರೋ ಇಬ್ಬರಿಂದ ಮೂವರು ಐಎಸ್ ಉಗ್ರರು ಗುಂಡಿನ ಮಳೆ ಸುರಿಸ್ತಾರೆ. ಸೆಪ್ಟೆಂಬರ್ ಮಧ್ಯಭಾಗದಿಂದ ಈವರೆಗೆ ಕನಿಷ್ಠ ನೂರು ದಾಳಿ ನಡೆದಿವೆ. ಇದ್ರಲ್ಲಿ 85 ದಾಳಿ ತಾಲಿಬಾನಿಗಳನ್ನೇ ಗುರಿಯಾಗಿಸಿಕೊಂಡು ನಡೆಸಲಾಗಿದೆ. ಇದ್ರ ಬೆನ್ನಲ್ಲೇ ತಾಲಿಬಾನಿಗಳು ಜಲಾಲಾಬಾದ್​​ಗೆ ಹೆಚ್ಚುವರಿಯಾಗಿ ಒಂದೂವರೆ ಸಾವಿರ ಫೈಟರ್​ಗಳನ್ನು ಕಳುಹಿಸೋದಾಗಿಯೂ ಹೇಳಿದ್ದರು. ಇದ್ರ ಬೆನ್ನಲ್ಲೇ ಅಲ್ಲಲ್ಲಿ ರಹಸ್ಯವಾಗಿ ಐಎಸ್ ಉಗ್ರರ ಮೃತದೇಹಗಳು ಪತ್ತೆಯಾಗೋಕೆ ಶುರುವಾಗಿದೆ ಅಂತ ಹೇಳಲಾಗ್ತಿದೆ.

-masthmagaa.com

Contact Us for Advertisement

Leave a Reply