ಕಜಕ್​ಸ್ತಾನ್​​ ಪ್ರತಿಭಟನೆ | 160+ ಸಾವು, 9000+ ಅರೆಸ್ಟ್, ನಿಧಾನಕ್ಕೆ ಸ್ಥಿತಿ ಶಾಂತ

masthmagaa.com:

ಕಜಕ್​ಸ್ತಾನ್​​ನಲ್ಲಿ ಗ್ಯಾಸ್ ಮತ್ತು ತೈಲ ದರ ಏರಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ 160ಕ್ಕು ಹೆಚ್ಚು ಜನ ಪ್ರಾಣ ಬಿಟ್ಟಿದ್ದು, 9 ಸಾವಿರಕ್ಕೂ ಅಧಿಕ ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಸದ್ಯ ಪರಿಸ್ಥಿತಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಕಜಕ್​ಸ್ತಾನ್​​ ರಾಷ್ಟ್ರಪತಿ ಖಾಸಿಂ ಜೋಮಾರ್ತ್​ ಟೊಕಾಯೇವ್​​, ಈ ಹಿಂಸಾಚಾರವನ್ನು ಕ್ಷಿಪ್ರಕ್ರಾಂತಿಕಗೆ ನಡೆಸಿದ ಪ್ರಯತ್ನ ಅಂತ ಕರೆದಿದ್ದಾರೆ. ಭದ್ರತಾ ಪಡೆ ಶಾಂತಿಯುತವಾಗಿ ಪ್ರತಿಭಟಿಸೋ ಜನರ ಮೇಲೆ ಗುಂಡು ಹಾರಿಸೋದಿಲ್ಲ. ಕೆಲವೊಂದು ಶಸ್ತ್ರಾಸ್ತ್ರ ಸಜ್ಜಿತ ಗುಂಪುಗಳು ಪ್ರತಿಭಟನೆಕಾರರ ನಡುವೆ ಸೇರಿಕೊಂಡಿದ್ರು. ಇದ್ರಿಂದ ಹಿಂಸಾಚಾರ ಆಯ್ತು.. ದೇಶದ ಕಾನೂನು, ಸುವ್ಯವಸ್ಥೆಯನ್ನು ಹಾಳು ಮಾಡೋದೇ ಅವರ ಉದ್ದೇಶವಾಗಿತ್ತು ಅಂತ ರಾಷ್ಟ್ರಪತಿ ಆರೋಪಿಸಿದ್ದಾರೆ. ಸದ್ಯದಲ್ಲೇ ದೇಶಕ್ಕೆ ಹೊಸ ಹೊಸ ಪ್ರಧಾನ ಮಂತ್ರಿಯನ್ನು ಕೂಡ ಟೊಕಾಯೇವ್ ಘೋಷಿಸಲಿದ್ದಾರೆ. ರಷ್ಯಾ ನೇತೃತ್ವದ ಸೇನಾ ಪಡೆ ಕೂಡ ಸದ್ಯದಲ್ಲೇ ಮಿಷನ್ ಅಂತ್ಯಗೊಳಿಸಿ ವಾಪಸ್ಸಾಗೋ ಸಾಧ್ಯತೆ ಇದೆ.

-masthmagaa.com

Contact Us for Advertisement

Leave a Reply