2020ರಲ್ಲಿ ಮಕ್ಕಳ ಸಂಬಂಧಿತ ಅಪರಾಧದಲ್ಲಿ ಭಾರಿ ಹೆಚ್ಚಳ!

masthmagaa.com:

ಕೊರೋನಾ ಬಂದ ನಂತರ ಆನ್​​ಲೈನ್ ಕ್ಲಾಸ್​​ಗಳಿಂದಾಗಿ ಹೆಚ್ಚೆಚ್ಚು ಮಕ್ಕಳ ಕೈಗೆ ಸ್ಮಾರ್ಟ್​​ಫೋನ್​​ಗಳು ಬಂದಿವೆ. ಆದ್ರೆ ಇದ್ರ ಬೆನ್ನಲ್ಲೇ ರಾಷ್ಟ್ರೀಯ ಅಪರಾಧಗಳ ದಾಖಲೆಯ ದಳ ಶಾಕಿಂಗ್ ಮಾಹಿತಿ ನೀಡಿದೆ. 2019ಕ್ಕೆ ಹೋಲಿಸಿದ್ರೆ 2020ರಲ್ಲಿ ಮಕ್ಕಳ ವಿರುದ್ಧದ ಸೈಬರ್‌ ಅಪರಾಧ ಪ್ರಕರಣಗಳು ಶೇಕಡಾ 400ರಷ್ಟು ಹೆಚ್ಚಾಗಿವೆ ಅಂತ ಮಾಹಿತಿ ನೀಡಿದೆ. ಈ ಅಪರಾಧಗಳೆಲ್ಲ ಮಕ್ಕಳನ್ನು ಲೈಂಗಿಕವಾಗಿ ಬಳಸಿ, ಅಶ್ಲೀಲವಾಗಿ ಚಿತ್ರಿಸೋದು ಮತ್ತು ಅದನ್ನು ಬೇರೆ ಕಡೆ ಕಳುಹಿಸೋದಕ್ಕೆ ಸಂಬಂಧಿಸಿದೆ. ಉತ್ತರ ಪ್ರದೇಶದಲ್ಲಿ 170, ಕರ್ನಾಟಕದಲ್ಲಿ 144, ಮಹಾರಾಷ್ಟ್ರದಲ್ಲಿ 137), ಕೇರಳದಲ್ಲಿ 107 ಮತ್ತು ಒಡಿಶಾದಲ್ಲಿ 71 ಇಂಥಹ ಪ್ರಕರಣಗಳು ದಾಖಲಾಗಿದೆ. ಟೋಟಲ್ 842 ಕೇಸ್ ದಾಖಲಾಗಿದ್ದು, 2019ರಲ್ಲಿ ಈ ಸಂಖ್ಯೆ 164 ಇತ್ತು ಅಂತ ಕೂಡ ರಾಷ್ಟ್ರೀಯ ಅಪರಾಧಗಳ ದಾಖಲೆಯ ದಳ ತಿಳಿಸಿದೆ.

-masthmagaa.com

Contact Us for Advertisement

Leave a Reply