6,400 ಮಂದಿ ಪತ್ರಕರ್ತರ ಕೆಲಸ ಕಿತ್ತುಕೊಂಡ ತಾಲಿಬಾನ್ ಸರ್ಕಾರ!

masthmagaa.com:

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಟೇಕೋವರ್ ಮಾಡಿಕೊಂಡ ಬಳಿಕ 6400 ಮಂದಿ ಪತ್ರಕರ್ತರು ಕೆಲಸ ಕಳೆದುಕೊಂಡಿದ್ದಾರೆ ಅಂತ ಗೊತ್ತಾಗಿದೆ. ರಿಪೋರ್ಟರ್ಸ್​ ವಿಥೌಟ್ ಬಾರ್ಡರ್ಸ್​​ ಮತ್ತು ಅಫ್ಘನ್ ಇಂಡಿಪೆಂಡೆಂಟ್ ಜರ್ನಲಿಸ್ಟ್ ಅಸೋಸಿಯೇಷನ್ ನಡೆಸಿದ ಸಮೀಕ್ಷೆಯಲ್ಲಿ ಈ ವಿಚಾರ ಹೊರಬಿದ್ದಿದೆ. ಸುಮಾರು 231 ಮಂದಿ ಮಾಧ್ಯಮ ಸಂಸ್ಥೆಗಳು ಬಾಗಿಲು ಮುಚ್ಚಿವೆ. ತಾಲಿಬಾನಿಗಳು ಟೇಕೋವರ್ ಮಾಡಿಕೊಳ್ಳುವ ಮುನ್ನ 543 ಮಾಧ್ಯಮ ಸಂಸ್ಥೆಗಳು ಕೆಲಸ ಮಾಡ್ತಿದ್ವು. ಆದ್ರೆ ನಂತರದಲ್ಲಿ ಇವುಗಳ ಸಂಖ್ಯೆ ನಿರಂತರವಾಗಿ ಕಡಿಮೆಯಾಗ್ತಾ ಬಂದಿದ್ದು, ಈಗ 312 ಸಂಸ್ಥೆಗಳು ಮಾತ್ರ ಕೆಲಸ ಮಾಡ್ತಿವೆ. ಸುಮಾರು 43 ಪರ್ಸೆಂಟ್​​ನಷ್ಟು ಸಂಸ್ಥೆಗಳು ಸದ್ದಿಲ್ಲದೆ ಮಾಯವಾಗಿವೆ ಅಂತ ವರದಿಯಲ್ಲಿ ಹೇಳಲಾಗಿದೆ. ವಿಶ್ವದ ಮುಂದೆ ಅಫ್ಘಾನಿಸ್ತಾನದ ಜನತೆಗೆ ಎಲ್ಲಾ ರೀತಿಯ ಸ್ವಾತಂತ್ರ್ಯ ಕೊಡ್ತೀವಿ ಅನ್ನೋ ತಾಲಿಬಾನಿಗಳ ನಿಜಬಣ್ಣ ಮತ್ತೊಮ್ಮೆ ಬಟಾಬಯಲಾಗಿದೆ.

-masthmagaa.com

Contact Us for Advertisement

Leave a Reply