ಚಾಮರಾಜನಗರ ಆಕ್ಸಿಜನ್ ದುರಂತಕ್ಕೆ ರೋಹಿಣಿ ಕಾರಣನಾ..?

masthmagaa.com:

ರೋಹಿಣಿ ಸಿಂಧೂರಿ ವರ್ಗಾವಣೆ ಆಗ್ತಿದ್ದಂತೆ ಚಾಮರಾಜನಗರ ಆಕ್ಸಿಜನ್ ದುರಂತ ಕೂಡ ಭಾರಿ ಚರ್ಚೆಯಾಗ್ತಿದೆ. ಅದಕ್ಕೆ ಕಾರಣ ಮೈಸೂರು ಸಂಸದ ಪ್ರತಾಪ್ ಸಿಂಹ ನೀಡಿರುವ ಒಂದು ಹೇಳಿಕೆ. ಫೇಸ್​ಬುಕ್​ನಲ್ಲಿ ಮಾತನಾಡಿದ್ದ ಅವರು, ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಸದಂತೆ ರೋಹಿಣಿ ಸಿಂಧೂರಿ ಮೌಖಿಕವಾಗಿ ಆದೇಶ ನೀಡಿದ್ರು. ಹೀಗಾಗಿಯೇ ಆಕ್ಸಿಜನ್ ಚಾಮರಾಜನಗರಕ್ಕೆ ಹೋಗಿರಲಿಲ್ಲ. ಈ ಬಗ್ಗೆ ಗೊತ್ತಿದ್ರೂ ಮೈಸೂರು ಮರ್ಯಾದೆ ಉಳಿಸಲು ನಾನು ಸುಮ್ಮನಿರಬೇಕಾಯ್ತು ಅಂತ ಹೇಳಿದ್ದಾರೆ. ಆದ್ರೆ ಅವತ್ತು ಆಕ್ಸಿಜನ್ ದುರಂತದಲ್ಲಿ 24 ಮಂದಿ ಜೀವ ಕಳ್ಕೊಂಡಿದ್ದಾಗ ಅದಕ್ಕೆ ಮೈಸೂರು ಡಿಸಿ ರೋಹಿಣಿ ಸಿಂಧೂರಿಯೇ ಕಾರಣ ಅಂತ ಚಾಮರಾಜನಗರ ಡಿಸಿ ರವಿ ಆರೋಪಿಸಿದ್ರು. ಆದ್ರೆ ಆಗ ಇದೇ ಪ್ರತಾಪ್ ಸಿಂಹ, ರೋಹಿಣಿ ಸಿಂಧೂರಿ ಪರವಾಗಿ ಬ್ಯಾಟ್ ಬೀಸಿದ್ರು.

ಇನ್ನು ಇದ್ರ ಬೆನ್ನಲ್ಲೇ ರೋಹಿಣಿ ಸಿಂಧೂರಿಯವರು ಉಪ ಔಷಧ ನಿಯಂತ್ರಕ ಅರುಣ್ ಎಂಬುವವರ ಜೊತೆ ಮಾತನಾಡಿದ್ದು ಎನ್ನಲಾದ ಆಡಿಯೋವೊಂದು ಬಹಿರಂಗವಾಗಿದೆ. ಇದ್ರಲ್ಲಿ ಚಾಮರಾಜನಗರಕ್ಕೆ ಯಾಕಿಷ್ಟು ಆಕ್ಸಿಜನ್ ಪೂರೈಕೆಯಾಗ್ತಿದೆ ಅಂತ ಪ್ರಶ್ನಿಸಿರೋ ರೋಹಿಣಿ ಸಿಂಧೂರಿ, ಯಾವ ಆಸ್ಪತ್ರೆಗೆ ಎಷ್ಟು ಆಕ್ಸಿಜನ್ ಪೂರೈಕೆಯಾಗ್ತಿದೆ ಅನ್ನೋದರ ಬಗ್ಗೆ ರೆಕಾರ್ಡ್​ ತೆಗೆದುಕೊಂಡು ಕಚೇರಿಗೆ ಬಾ ಅಂತ ಏಕವಚನದಲ್ಲಿ ಹೇಳಿದ್ದಾರೆ. ಇದ್ರ ಜೊತೆಗೆ ಆಕ್ಸಿಜನ್ ಏಜೆನ್ಸಿಗೂ ಕರೆ ಮಾಡಿ ಚಾಮರಾಜನಗರಕ್ಕೆ ಆಕ್ಸಿಜನ್ ಪೂರೈಸದಂತೆ ತಾಕೀತು ಮಾಡಿದ್ರು ಅನ್ನೋ ಆರೋಪ ಕೂಡ ಕೇಳಿ ಬಂದಿದೆ.

-masthmagaa.com

Contact Us for Advertisement

Leave a Reply