ಪೈಲ್ವಾನ್ ಸಿನಿಮಾ ಹೀಗಿದೆ.. ಮೊದಲ ದಿನದ ರಿವ್ಯೂ..

ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ ಪೈಲ್ವಾನ್ ಚಿತ್ರ ರಿಲೀಸ್ ಆಗಿದೆ. 3000ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಬಿಡುಗಡೆಯಾಗಿರುವ ಪೈಲ್ವಾನ್, ಧೂಳ್ ಎಬ್ಬಿಸುತ್ತಿದ್ದಾನಾ ಅಥವಾ ಡಲ್ ಹೊಡೆಯುತ್ತಿದ್ದಾನಾ..? ಸಿನಿಮಾದ ಸ್ಟೋರಿ ಏನು..? ಸಿನಿಮಾ ಹೇಗೆ ಮೂಡಿಬಂದಿದೆ..? ಪೈಲ್ವಾನ್ ನೋಡಿದವರು ಏನು ಹೇಳುತ್ತಿದ್ದಾರೆ..? ಎಲ್ಲವನ್ನ ಹೇಳ್ತೀವಿ ಓದುತ್ತಾ ಹೋಗಿ..

ಸಿನಿಮಾದ ಕಥೆ ಏನು..?
ಅನಾಥ ಹುಡುಗನೊಬ್ಬ ಪೈಲ್ವಾನ್ ಒಬ್ಬರ ಮನೆ ಸೇರಿಕೊಂಡು, ಯಜಮಾನನ ಆಸೆಯಂತೆ ಬಾಕ್ಸಿಂಗ್ ಚಾಂಪಿಯನ್ ಆಗುವುದೇ ಸಿನಿಮಾದ ಒನ್ ಲೈನ್ ಸ್ಟೋರಿ. ಚಿತ್ರದಲ್ಲಿ ಕಿಚ್ಚ ಸುದೀಪ್ ಹೆಸ್ರು ಕೃಷ್ಣ ಅಂತ. ಇಂತಹ ಕೃಷ್ಣ ಸರ್ಕಾರ್ ಅಲಿಯಾಸ್ ಸುನಿಲ್ ಶೆಟ್ಟಿ ಅವರ ಗರಡಿಯಲ್ಲಿ ಬೆಳೆಯುತ್ತಾನೆ. ಸರ್ಕಾರನೇ ಕೃಷ್ಣನಿಗೆ ತಂದೆ-ತಾಯಿ ಎಲ್ಲವೂ. ಕೃಷ್ಣನ ಯೋಚನೆ ಆಲೋಚನೆಗಳೆಲ್ಲವೂ ಕೇವಲ ಚಾಂಪಿಯನ್ ಆಗುವುದರತ್ತ ಇರಬೇಕು ಅನ್ನೋದು ಸರ್ಕಾರ್ ಆಸೆ. ಈ ಮಧ್ಯೆ ಕೃಷ್ಣನ ಬಾಳಲ್ಲಿ ಉದ್ಯಮಿಯ ಮಗಳು ಎಂಟ್ರಿ ಆಗ್ತಾಳೆ. ಇಬ್ಬರ ನಡುವೆ ಪ್ರೇಮಾಂಕುರವಾಗಿ ಮದುವೆ ಆಗುತ್ತೆ. ಆದರೆ ಪೈಲ್ವಾನ್ ಜೊತೆ ಮಗಳ ಮದುವೆ ಸಹಿಸದ ಉದ್ಯಮಿ ಸರ್ಕಾರ್ ಬಳಿ ಹೋಗುತ್ತಾನೆ. ಈ ವೇಳೆ ನಿನ್ನ ಮಗಳ ಬಾಳಲ್ಲಿ ಪೈಲ್ವಾನ್ ಬರೋದಿಲ್ಲ ಅಂತ ಸರ್ಕಾರ್ ಉದ್ಯಮಿಗೆ ಮಾತು ಕೊಡುತ್ತಾನೆ. ಆದರೆ ಕಟ್ಟಿಕೊಂಡ ಹೆಂಡತಿಯನ್ನ ಬಿಟ್ಟುಕೊಡದ ಕೃಷ್ಣ ಅಲಿಯಾಸ್ ಪೈಲ್ವಾನ್, ಸರ್ಕಾರ್ ನಿಂದ ದೂರವಾಗುತ್ತಾನೆ. ಹೆಂಡತಿ ಜೊತೆ ಊರೇ ಬಿಡುವ ಪೈಲ್ವಾನ್ ಗೆ ಸಾಕಷ್ಟು ಕಷ್ಟಗಳು ಎದುರಾಗುತ್ತವೆ. ಆಮೇಲೆ ಏನಾಗುತ್ತೆ ಅನ್ನೋದನ್ನ ಥಿಯೇಟರ್ ಗೆ ಹೋಗಿಯೇ ನೋಡಿ.

ಸಿನಿಮಾದ ಫಸ್ಟ್ ಆಫ್ ನಲ್ಲಿ ಪೈಲ್ವಾನ್ ನ ವೈಭವ ಅನಾವರಣಗೊಂಡ್ರೆ, ಸೆಕೆಂಡ್ ಆಫ್ ನಲ್ಲಿ ಅಸಲಿ ಸ್ಟೋರಿ ತೆರೆದುಕೊಳ್ಳುತ್ತದೆ. ಪೈಲ್ವಾನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುದೀಪ್ ಇಡೀ ಸಿನಿಮಾವನ್ನು ಆವರಿಸಿಕೊಂಡಿದ್ದಾರೆ. ಅವನಿಗೆ ಇರಬೇಕಾದ ಗತ್ತು ಗೈರತ್ತು ಗಾಂಭೀರ್ಯತೆ ಕಿಚ್ಚನ ನೋಟದಲ್ಲಿ ಎದ್ದು ಕಾಣುತ್ತೆ. ಇನ್ನು ಹಾಡುಗಳು ಸಿನಿಮಾದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದೆ. ಸೆಟ್, ಆದರೆ ಹಾಗೂ ಕಲರ್ ಕಾಂಬಿನೇಷನ್ ಗಳು ಚಿತ್ರವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತೆ.

ಇನ್ನು ಕೃಷ್ಣ ಅಲಿಯಾಸ್ ಸುದೀಪನ ಪತ್ನಿ ಪಾತ್ರದಲ್ಲಿ ಆಕಾಂಕ್ಷ ಸಿಂಗ್ ಸಕತ್ತಾಗಿ ಆಕ್ಟಿಂಗ್ ಮಾಡಿದ್ದಾರೆ. ಸುನಿ ಶೆಟ್ಟಿ ತಮ್ಮ ಸರ್ಕಾರ್ ಪಾತ್ರಕ್ಕೆ ಘನತೆ ತುಂಬಿದ್ದಾರೆ. ಇನ್ನು ಎಲ್ಲರನ್ನು ನಗಿಸುವ ಪಪ್ಪು ಪಾತ್ರವೊಂದು ಚಿತ್ರದಲ್ಲಿದೆ. ಹೀಗೆ ಪ್ರತಿ ಪಾತ್ರ ಕ್ಕು ಜೀವತುಂಬಲು ಕಲಾವಿದರು ಸಾಕಷ್ಟು ಶ್ರಮಿಸಿದ್ದಾರೆ. ಹಾಗೆ ಕ್ಯಾರೆಕ್ಟರ್ ಸೆಲೆಕ್ಷನ್, ಮೇಕಿಂಗ್ ಗೆ ಡೈರೆಕ್ಟರ್ ಎಸ್ ಕೃಷ್ಣ ತುಂಬಾ ಇಷ್ಟವಾಗುತ್ತಾರೆ.

ಬೆಂಗಳೂರಿನ ಚಿತ್ರಮಂದಿರಗಳು ಬೆಳಗ್ಗೆಯಿಂದಲೇ ಹೌಸ್ ಫುಲ್ ಆಗಿವೆ. ಇನ್ನು ಸಿನಿಮಾ ನೋಡಿದವರು ಪೈಲ್ವಾನ್ ಬಗ್ಗೆ ಮಿಶ್ರಪ್ರತಿಕ್ರಿಯೆ ನೀಡುತ್ತಿದ್ದಾರೆ. ಕೆಲವರಿಗೆ ಕಿಚ್ಚ ಸುದೀಪನ ಎಂಟ್ರಿ ಇಷ್ಟವಾಗಿದ್ದರೆ. ಇನ್ನು ಕೆಲವರು ಸ್ಟೋರಿ ಫಾಸ್ಟಾಗಿ ಸಾಗುತ್ತಿಲ್ಲ ಅಂತ ಹೇಳ್ತಿದ್ದಾರೆ. ಇಷ್ಟು ಪೈಲ್ವಾನ್ ಚಿತ್ರದ ಕಥೆ ಹಾಗೂ ಕ್ಯಾರೆಕ್ಟರ್ ಬಗ್ಗೆ ಒಂದಷ್ಟು ಮಾಹಿತಿ. ಸಿನಿಮಾ ಬರೀ ಇಷ್ಟೇ ಅಲ್ಲ ದಯವಿಟ್ಟು ಥಿಯೇಟರ್ ಗಳಿಗೆ ಹೋಗಿ ಪೈಲ್ವಾನ್ ಚಿತ್ರವನ್ನು ನೋಡಿ ಕನ್ನಡದ ಸಿನಿಮಾಗಳಿಗೆ ಸಪೋರ್ಟ್ ಮಾಡಿ.

Contact Us for Advertisement

Leave a Reply