ಜಮ್ಮುವಿನಲ್ಲಿ ಮತ್ತೆ ಡ್ರೋನ್ ಹಾರಾಟ..! ಬೆದರಿಸಿ ಹಿಮ್ಮೆಟ್ಟಿಸಿದ ಯೋಧರು!

masthmagaa.com:

ಮೊನ್ನೆ ರಾತ್ರಿ ಜಮ್ಮು ಏರ್​​ಫೋರ್ಸ್​ ಸ್ಟೇಷನ್​ ಮೇಲೆ ದಾಳಿ ನಡೆದು ಫುಲ್ ಸುದ್ದಿಯಾಗಿತ್ತು. ಇದ್ರ ಬೆನ್ನಲ್ಲೇ ನಿನ್ನೆ ರಾತ್ರಿ ಮತ್ತೆ ಜಮ್ಮುವಿನ ರತ್ನುಚಾಕ್ ಮತ್ತು ಕಾಲುಚಾಕ್ ಮಿಲಿಟರಿ ಸ್ಟೇಷನ್​ ಬಳಿ ಮತ್ತೆರಡು ಡ್ರೋನ್​​ಗಳು ಹಾರಿವೆ. ಈ ವೇಳೆ ಯೋಧರು ನಿರಂತರವಾಗಿ ಗುಂಡಿನ ದಾಳಿ ನಡೆಸಿದ್ದು, ಕೂಡಲೇ ಡ್ರೋನ್​​ಗಳು ವಾಪಸ್ ಹೋಗಿವೆ. ರಾತ್ರಿ 11.30ಕ್ಕೆ ಒಂದು ನಂತರ 1.30ಕ್ಕೆ ಮತ್ತೊಂದು ಡ್ರೋನ್ ಪತ್ತೆಯಾಗಿದೆ. ಸದ್ಯ ಮಿಲಿಟರಿ ಸ್ಟೇಷನ್​​ಗಳನ್ನು ಸುತ್ತುವರಿದಿರುವ ಯೋಧರು, ಶೋಧಕಾರ್ಯ ನಡೆಸುತ್ತಿದ್ದಾರೆ. ಮೊನ್ನೆ ರಾತ್ರಿಯಷ್ಟೇ ಜಮ್ಮು ಏರ್​​ಫೋರ್ಸ್​ ಸ್ಟೇಷನ್ ಮೆಲೆ ದಾಳಿ ನಡೆದಿತ್ತು. ಭಾರತದ ಮಿಲಿಟರಿ ನೆಲೆ ಮೇಲೆ ನಡೆದ ಮೊದಲ ಡ್ರೋನ್ ದಾಳಿ ಇದಾಗಿತ್ತು. ಇದ್ರ ಹಿಂದೆ ಪಾಕಿಸ್ತಾನ ಮೂಲದ ಉಗ್ರರ ಕೈವಾಡ ಇದೆ ಅಂತ ತನಿಖಾ ತಂಡ ಮತ್ತು ಪೊಲೀಸರು ಮಾಹಿತಿ ನೀಡಿದ್ರು. ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಬಳಿಕ ಗಡಿಯಲ್ಲಿ ನುಸುಳೋಕೆ ಉಗ್ರರಿಗೆ ಸಾಧ್ಯವಾಗ್ತಿಲ್ಲ. ಹೀಗಾಗಿ ಈಗ ದಾಳಿ ನಡೆಸೋಕೆ ಡ್ರೋನ್​​ಗಳ ಮೊರೆ ಹೋಗಿದೆ ಪಾಕಿಸ್ತಾನ.

-masthmagaa.com

Contact Us for Advertisement

Leave a Reply