ಪಾಕ್​​ನಲ್ಲಿ ಭಾರಿ ಪ್ರತಿಭಟನೆ.. ಇಮ್ರಾನ್​ ಸರ್ಕಾರ ಏನು ಮಾಡುತ್ತಿದೆ?

masthmagaa.com:

ಪಾಕಿಸ್ತಾನದ ಇಮ್ರಾನ್​ ಖಾನ್ ಸರ್ಕಾರ ಮತ್ತು ಬ್ಯಾನ್ ಆಗಿರೋ ಮೂಲಭೂತವಾದಿ ಸಂಘಟನೆಯಾದ ಟಿಎಲ್​ಪಿ ನಡುವಿನ ಸಂಘರ್ಷ ಜೋರಾಗಿದೆ. ವಿವಿಧ ಬೇಡಿಕೆಗಳನ್ನ ಇಟ್ಟುಕೊಂಡು ತೆಹ್ರೀಕ್ ಎ ಲಬ್ಬೈಕ್​ ಪಾಕಿಸ್ತಾನ್​ ಸಂಘಟನೆಯ ಕಾರ್ಯಕರ್ತರು ದೇಶದ ವಿವಿಧ ಭಾಗಗಳಲ್ಲಿ ರಸ್ತೆಗಳನ್ನ ತಡೆದು ಪ್ರತಿಭಟನೆ ಮಾಡ್ತಿದ್ದಾರೆ. ಈ ಪ್ರತಿಭಟನೆ ಈಗ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್​ ಕಡೆಗೆ ಬರ್ತಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಪಾಕಿಸ್ತಾನದ ಇಂಟೀರಿಯರ್ ಮಿನಿಸ್ಟರ್​ ಶೇಖ್ ರಶೀದ್ ಅಹ್ಮದ್​, ಟಿಎಲ್​ಪಿ ಸಂಘಟನೆ ಸರ್ಕಾರಕ್ಕೆ ನೀಡಿರುವ ಭರವಸೆಗಳಿಗೆ ಬದ್ಧವಾಗಿರಬೇಕು. ಪ್ರತಿಭಟನೆ ವಾಪಸ್ ಪಡೀಬೇಕು. ಇಲ್ಲದಿದ್ದರೆ ನಾನೇನು ಮಾಡೋಕೂ ಆಗಲ್ಲ, ನನ್ನ ಕಂಟ್ರೋಲ್​​ನಲ್ಲಿ ಆಗ ಏನೂ ಇರಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೆ ನಿಮ್ಮ ನಾಯಕ ಸಾದ್​ ಹುಸೇನ್ ರಿಝ್ವಿ ಜೊತೆ ಹಲವು ಸಲ ಮಾತನಾಡಿದ್ದೀವಿ, ಇವತ್ತು ಅಥವಾ ನಾಳೆಯೂ ಮಾತಾಡ್ತೀವಿ. ಮಾತುಕತೆ ನಡೀಬೇಕು ಅಂದ್ರೆ ನೀವು ಹಿಂದೆ ಸರೀಬೇಕು ಅಂತ ಆಗ್ರಹಿಸಿದ್ದಾರೆ. ಈ ಮೂಲಕ ಪ್ರತಿಭಟನಾಕಾರರು ಇಸ್ಲಾಮಾಬಾದ್​​ಗೆ ಬಂದ್ರೆ ಸುಮ್ನೆ ಬಿಡಲ್ಲ, ಅವರನ್ನ ಏನಾದ್ರೂ ಮಾಡಿ ತಡ್ದೇ ತಡೀತೀವಿ ಅನ್ನೋ ಸಂದೇಶ ರವಾನಿಸಿದೆ ಇಮ್ರಾನ್​ ಖಾನ್​ ಸರ್ಕಾರ. ಪಾಕ್​ ಪ್ರಧಾನಿ ಇಮ್ರಾನ್ ಖಾನ್ ಕೂಡ ಇವತ್ತು ನ್ಯಾಷನಲ್​ ಸೆಕ್ಯೂರಿಟಿ ಕಮಿಟಿಯ ಸಭೆಯನ್ನ ಕರೆದಿದ್ದಾರೆ. ಅಂದ್ಹಾಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಟಿಎಲ್​ಪಿ ಸಂಘಟನೆ ಪ್ರತಿಭಟನೆ ನಡೆಸ್ತಿದೆ. ಜೈಲಿನಲ್ಲಿರೋ ತಮ್ಮ ನಾಯಕ ಸಾದ್​ ಹುಸೇನ್​ ರಿಝ್ವಿಯನ್ನ ಬಿಡುಗಡೆ ಮಾಡ್ಬೇಕು, ಪಾಕಿಸ್ತಾನದಲ್ಲಿರೋ ಫ್ರಾನ್ಸ್ ರಾಯಭಾರಿಯನ್ನ ವಾಪಸ್​ ಕಳಿಸಬೇಕು, ಫ್ರಾನ್ಸ್​ನ ಸರಕುಗಳನ್ನ ಬ್ಯಾನ್ ಮಾಡ್ಬೇಕು ಅನ್ನೋದು ಟಿಎಲ್​ಪಿ ಬೇಡಿಕೆ. ಈ ಹಿಂದೆ ಫ್ರಾನ್ಸ್​​​ನಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ವ್ಯಂಗ್ಯಚಿತ್ರದ ವಿವಾದವಾದಾಗ ಫ್ರಾನ್ಸ್​ ರಾಯಭಾರಿಯನ್ನ ವಾಪಸ್ ಕಳುಹಿಸಬೇಕು ಅಂತ ಪಾಕ್​​ನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಆಗ ಸಾದ್ ರಿಜ್ವಿಯನ್ನ ಅರೆಸ್ಟ್ ಮಾಡಲಾಗಿತ್ತು.

-masthmagaa.com

Contact Us for Advertisement

Leave a Reply