ಶ್ರೀನಗರ-ಯುಎಇ ವಿಮಾನಕ್ಕೆ ಬಾಗಿಲು ಮುಚ್ಚಿದ ಪಾಕಿಸ್ತಾನ!

masthmagaa.com:

ಜಮ್ಮು ಕಾಶ್ಮೀರದ ಶ್ರೀನಗರದಿಂದ ಯುನೈಟೆಡ್ ಅರಬ್ ಎಮಿರೇಟ್ಸ್​​​ನ ಶಾರ್ಜಾಗೆ ಹೊರಟಿದ್ದ ಡೈರೆಕ್ಟ್ ಫ್ಲೈಟ್​​ಗೆ ತನ್ನ ವಾಯುಪ್ರದೇಶ ಬಳಸಿಕೊಳ್ಳಲು ಪಾಕಿಸ್ತಾನ ಅವಕಾಶ ನೀಡಿಲ್ಲ. ಕಡಿಮೆ ವೆಚ್ಚದ ವಿಮಾನಯಾನ ಸಂಸ್ಥೆ ಗೋ ಫಸ್ಟ್​ ಆಪರೇಟ್ ಮಾಡೋ ವಿಮಾನ ಇದಾಗಿದ್ದು, ಕಳೆದ ತಿಂಗಳು ಗೃಹಸಚಿವ ಅಮಿತ್ ಶಾ ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಇದನ್ನು ಉದ್ಘಾಟಿಸಿದ್ರು. ಪಾಕಿಸ್ತಾನ ವಾಯುಪ್ರದೇಶ ಬಳಸಲು ಅನುಮತಿ ನೀಡದ ಸುದ್ದಿಯನ್ನು ನಾಗರಿಕ ವಿಮಾನಯಾನ, ವಿದೇಶಾಂಗ ಮತ್ತು ಗೃಹಸಚಿವಾಲಯ ಖಚಿತಪಡಿಸಿದೆ. ಈ ಹಿಂದೆ 2009ರಲ್ಲಿ ಶ್ರೀನಗರ- ದುಬೈ ವಿಮಾನಕ್ಕೆ ಪಾಕಿಸ್ತಾನ ತನ್ನ ವಾಯುಪ್ರದೇಶ ಮುಚ್ಚಿದ ಕಾರಣದಿಂದಾಗಿ ಬೇಡಿಕೆ ಕಡಿಮೆಯಾಗಿತ್ತು. ಇದ್ರಿಂದ ಸೇವೆಯೇ ಬಂದ್ ಆಗಿತ್ತು. ಈಗಲೂ ಅದೇ ರೀತಿಯಾಗುತ್ತಾ ಅನ್ನೋ ಅನುಮಾನ ಮೂಡಿದೆ. ಯಾಕಂದ್ರೆ ಪಾಕ್ ವಾಯುಪ್ರದೇಶ ಬಂದ್ ಮಾಡಿದ್ರೆ ಸುತ್ತು ಹೊಡ್ಕೊಂಡು ಹೋಗಬೇಕಾಗುತ್ತೆ. ಆಗ ಪ್ರಯಾಣದ ಸಮಯ ಮತ್ತು ಇಂಧನ ಜಾಸ್ತಿ ಖರ್ಚಾಗುತ್ತೆ. ಇದ್ರಿಂದ ಟಿಕೆಟ್ ದರ ಕೂಡ ಜಾಸ್ತಿಯಾಗುತ್ತೆ. ಅಕ್ಟೋಬರ್ 24ರಂದು ಈ ವಿಮಾನ ಸೇವೆ ಶುರುವಾಗಿದ್ದು, ಅಕ್ಟೋಬರ್ 30ರವರೆಗೆ ಪಾಕ್ ಏರ್​ಸ್ಪೇಸ್ ಮೂಲಕವೇ ಹಾದು ಹೋಗಿತ್ತು. ಆದ್ರೆ ನವೆಂಬರ್ 2ರಂದು ಹಾರಿದ ವಿಮಾನ ರಾಜಸ್ಥಾನ, ಗುಜರಾತ್ ದಾಟಿಕೊಂಡು ಯುಎಇ ಕಡೆಗೆ ಹಾರಿದೆ.

-masthmagaa.com

Contact Us for Advertisement

Leave a Reply