ಒಸಾಮಾ ಹತ್ಯೆಗೆ ಸಹಕರಿಸಿದ್ದ ವೈದ್ಯನಿಂದ ಜೈಲಿನಲ್ಲಿ ಸತ್ಯಾಗ್ರಹ..!

ಪಾಕಿಸ್ತಾನ: ಉಗ್ರ ಒಸಾಮಾ ಬಿನ್ ಲಾಡೆನ್ ಹುಡುಕಿ ಕೊಲ್ಲಲು ಸಹಾಯ ಮಾಡಿದ್ದ ಪಾಕಿಸ್ತಾನದ ವೈದ್ಯ ಈಗ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ಶುರು ಮಾಡಿದ್ದಾರೆ. ಶಕಿಲ್ ಅಫ್ರಿದಿ ಎಂಬ ವೈದ್ಯರ ನಕಲಿ ವಾಕ್ಸಿನೇಷನ್ ಕಾರ್ಯಕ್ರಮ ಅಲ್​​ಕೈದಾ ಉಗ್ರ ಒಸಾಮಾ ಬಿನ್ ಲಾಡೆನ್​​​ನನ್ನು ಹುಡುಕಿ, ಹೊಡೆದು ಹಾಕಲು ಸಿಐಎಗೆ ಸಹಕಾರಿಯಾಗಿತ್ತು. ಆದ್ರೆ ನಂತರದಲ್ಲಿ ಪಾಕಿಸ್ತಾನ ವೈದ್ಯ ಶಕಿಲ್ ಅಫ್ರಿದಿಗೆ ಉಗ್ರರ ಜೊತೆ ಲಿಂಕ್ ಇದೆ ಎಂದು ಆರೋಪಿಸಿ, ಕೇಸ್ ದಾಖಲಿಸಿತ್ತು. ಅದರಂತೆ ಶಕಿಲ್​​ಗೆ 33 ವರ್ಷಗಳ ಕಾಲ ಜೈಲುಶಿಕ್ಷೆ ವಿಧಿಸಲಾಗಿತ್ತು. ಆದ್ರೆ ನಂತರದಲ್ಲಿ ಅದನ್ನು ಕಡಿಮೆ ಮಾಡಿ 10 ವರ್ಷಗಳಿಗೆ ಇಳಿಸಲಾಗಿತ್ತು.

ಆದ್ರೆ ಶಕಿಲ್ ಅಫ್ರಿದಿ ಮಾತ್ರ ನನಗೆ ಯಾವ ಉಗ್ರರ ಜೊತೆಗೂ ಲಿಂಕ್ ಇಲ್ಲ ಎಂದೇ ವಾದಿಸಿಕೊಂಡು ಬಂದಿದ್ದಾರೆ. ಅಮೆರಿಕದ ಕೆಲ ಸಂಸದರು, ಶಕಿಲ್ ಅಫ್ರಿದಿ, ಒಸಾಮಾ ಹತ್ಯೆಗೆ ಸಹಕರಿಸಿದ್ದಕ್ಕಾಗಿ ಪಾಕಿಸ್ತಾನ ಈ ರೀತಿ ಸೇಡು ತೀರಿಸಿಕೊಳ್ಳುತ್ತಿದೆ ಅಂತ ಆರೋಪಿಸಿದ್ದಾರೆ.  ಅಲ್ಲದೆ ಹಲವು ವರ್ಷಗಳವರೆಗೆ ಶಕಿಲ್​​​​​​ಗೆ ವಕೀಲರನ್ನು ಭೇಟಿಯಾಗಲು ಕೂಡ ಅವಕಾಶ ನೀಡಿರಲಿಲ್ಲ.

2011ರಲ್ಲಿ ಒಸಾಮಾ ಬಿನ್ ಲಾಡೆನ್ ಹತ್ಯೆ ಪಾಕಿಸ್ತಾನಕ್ಕೆ, ಅದರಲ್ಲೂ ಪಾಕಿಸ್ತಾನದ ಸೇನೆಗೆ ವಿಶ್ವಮಟ್ಟದಲ್ಲಿ ಭಾರಿ ಮುಖಭಂಗ ಉಂಟು ಮಾಡಿತ್ತು. ಅಮೆರಿಕ ಚುನಾವಣೆ ವೇಳೆ ಡೊನಾಲ್ಡ್​ ಟ್ರಂಪ್ ಶಕಿಲ್ ಅಫ್ರಿದಿಯವರನ್ನು ಬಿಡುಗಡೆಗೊಳಿಸೋದಾಗಿ ಹೇಳಿದ್ದರೂ ಕೂಡ ಅಧಿಕಾರಕ್ಕೆ ಏರಿದ ಬಳಿಕ ಈ ಬಗ್ಗೆ ಮೌನವಾಗಿದ್ದಾರೆ. ಇದೀಗ ಶಕಿಲ್ ಅಫ್ರಿದಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

Contact Us for Advertisement

Leave a Reply