ಭಾರತದ ಜೊತೆ ಮತ್ತೆ ವ್ಯಾಪಾರ ಸಾಧ್ಯವಿಲ್ಲ ಅನ್ನೋಕೆ ಇಮ್ರಾನ್ ಖಾನ್​ ಕೊಟ್ಟ ಕಾರಣವಿದು..

masthmagaa.com:

ಪಾಕ್​ನಲ್ಲಿ ಸಕ್ಕರೆ, ಹತ್ತಿ ಮತ್ತು ಗೋದಿಯ ಬೆಲೆ ಹೆಚ್ಚಾಗ್ತಿರೋದ್ರಿಂದ ಮತ್ತು ಅವುಗಳ ಕೊರತೆ ಉಂಟಾಗಿರೋದ್ರಿಂದ ಈ ವಸ್ತುಗಳನ್ನ ಭಾರತದಿಂದ ಆಮದು ಮಾಡಿಕೊಳ್ಳಬಹುದು ಅಂತ ಪಾಕ್​ನ ಎಕನಾಮಿಕ್​ ಕೋಆರ್ಡಿನೇಷನ್ ಕಮಿಟಿ-ECC ಇಮ್ರಾನ್​ ಖಾನ್ ಸರ್ಕಾರಕ್ಕೆ ಇತ್ತೀಚೆಗೆ ಪ್ರಸ್ತಾವನೆ ಸಲ್ಲಿಸಿತ್ತು. ಆದ್ರೆ ಇಮ್ರಾನ್ ಖಾನ್ ಅವರ ಕ್ಯಾಬಿನೆಟ್​​ ಅದನ್ನ ತಿರಸ್ಕರಿಸಿತ್ತು. ಪಾಕ್​ ಹೀಗ್ಯಾಕೆ ಮಾಡ್ತು ಅನ್ನೋದಕ್ಕೆ ಇದೀಗ ಉತ್ತರ ಸಿಕ್ಕಿದೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370 ಅನ್ನ ರದ್ದು ಪಡಿಸಿರೋದನ್ನ ಭಾರತ ಮತ್ತೊಮ್ಮೆ ಪರಿಶಿಲಿಸೋವರೆಗೆ ಭಾರತದ ಜೊತೆ ಯಾವುದೇ ವ್ಯಾಪಾರ ಸಂಬಂಧ ಬೆಳೆಸಲ್ಲ ಅಂತ ಇಮ್ರಾನ್ ಖಾನ್ ಹೇಳಿದ್ದಾರೆ. ಎರಡೂ ದೇಶಗಳ ಸಂಬಂಧವನ್ನ ಪರಿಶೀಲಿಸೋ ಸಂಬಂಧ ಪಾಕ್​ ಪ್ರಧಾನಿ ಇಮ್ರಾನ್ ಖಾನ್, ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ರಾಷ್ಟ್ರೀಯ ಭದ್ರತೆ ಮತ್ತು ಸ್ಟ್ರಾಟಜಿಕ್ ಪಾಲಿಸಿಗೆ ಸಂಬಂಧಿಸಿದಂತೆ ಇಮ್ರಾನ್ ಖಾನ್​ ಅವರ ಸ್ಪೆಷಲ್ ಅಸಿಸ್ಟೆಂಟ್ ಮೊಯೀದ್ ಯುಸುಫ್ ವಿಶೇಷ ಸಭೆ ನಡೆಸಿದ್ರು.

ಈ ಸಭೆಯಲ್ಲಿ ಜಮ್ಮು-ಕಾಶ್ಮೀರ ಸಮಸ್ಯೆ ಬಗೆಹರಿಯೋವರೆಗೆ ಭಾರತದ ಜೊತೆ ವ್ಯಾಪಾರ ಸಂಬಂಧ ಇಲ್ಲ. ಭಾರತದಿಂದ ಈ ವಸ್ತುಗಳನ್ನ ಆಮದು ಮಾಡಿಕೊಳ್ಳಬಾರದು ಅಂತ ನಿರ್ಬಂಧ ಹೇರಿರೋದೇ ಜಮ್ಮು-ಕಾಶ್ಮೀರ ವಿಚಾರವಾಗಿ. ಸೋ ಈಗೇನಾದ್ರೂ ವ್ಯಾಪಾರ ಮಾಡಿದ್ರೆ ನಾವು ಕಾಶ್ಮೀರದ ಜನರ ಜೊತೆ ಇಲ್ಲ ಅನ್ನೋ ಮೆಸೇಜ್ ಪಾಸ್ ಆಗುತ್ತೆ. ಹೀಗಾಗಿ ಸದ್ಯಕ್ಕೆ ಭಾರತದ ಜೊತೆ ವ್ಯಾಪಾರ ಸಂಬಂಧ ಸಾಧ್ಯವಿಲ್ಲ ಅಂತ ಇಮ್ರಾನ್ ಖಾನ್ ಹೇಳಿದ್ದಾರೆ. ಸಕ್ಕರೆ, ಹತ್ತಿ, ಗೋದಿ ಬೆಲೆ ಜಾಸ್ತಿ ಆಗಿರೋದು ಪಾಕ್​ನಲ್ಲಿ. ಅದೆಲ್ಲಾ ಬೇಕಿರೋದು ಅವ್ರಿಗೆ. ನಾವೇನು ತಗೊಳ್ಳಿ ತಗೊಳ್ಳಿ ಅಂತ ಮುಂದೆ ಹೋಗಿಲ್ಲ. ಅವರ ದೇಶದ ಕಮಿಟಿಯೇ ಆಮದು ಮಾಡಿಕೊಳ್ಳಬಹುದು ಅಂತ ಸಲಹೆ ಕೊಟ್ಟಿದ್ದು. ಅಂದ್ಹಾಗೆ 2019ರ ಆಗಸ್ಟ್ 5ನೇ ತಾರೀಖು ಭಾರತ ಸರ್ಕಾರ ಆರ್ಟಿಕಲ್ 370 ರದ್ದು ಮಾಡಿತ್ತು. ಅದನ್ನ ವಿರೋಧಿಸಿದ ಪಾಕ್​ ಸರ್ಕಾರ ಭಾರತದ ಜೊತೆ ವ್ಯಾಪಾರ ಸಂಬಂಧವನ್ನ ಕಟ್ ಮಾಡ್ಕೋತು.

-masthmagaa.com

Contact Us for Advertisement

Leave a Reply