ಪಂಜಾಬ್‍ಗೆ ಮತ್ತೆ ಹಾರಿ ಬಂತು ಪಾಕ್ ಡ್ರೋನ್..!

ಪಾಕಿಸ್ತಾನದಿಂದ ಶಸ್ತ್ರಾಸ್ತ್ರ ಪೂರೈಕೆಗೆ ಬಂದಿದ್ದ ಮತ್ತೊಂದು ಡ್ರೋನ್ ಪತ್ತೆಯಾಗಿದೆ. ಪಾಕಿಸ್ತಾನ ಗಡಿ ಬಳಿಯ ಪಂಜಾಬ್‍ನ ಅಟ್ಟಾರಿಯಲ್ಲಿ ಪತ್ತೆಯಾಗಿದೆ. ಭಯೋತ್ಪಾದನೆಯ ಆರೋಪಿಯಾಗಿರುವ ಆಕಾಶ್ ದೀಪ್ ಡ್ರೋನ್ ಪತನಗೊಂಡಿದ್ದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿದ್ದಾನೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು ತಾಂತ್ರಿಕ ಸಮಸ್ಯೆಯಿಂದ ಡ್ರೋನ್ ವಾಪಸ್ ಪಾಕಿಸ್ತಾನಕ್ಕೆ ಹೋಗಲು ಆಗಲಿಲ್ಲ. ಹೀಗಾಗಿ ಆರೋಪಿ ಇದನ್ನು ಇಲ್ಲೇ ಗದ್ದೆಯಲ್ಲಿ ಬಚ್ಚಿಟ್ಟಿದ್ದಾನೆ ಅಂತ ಹೇಳಿದ್ದಾರೆ. ಇತ್ತೀಚೆಗೆ ಡ್ರೋಣ್ ಮೂಲಕ ಪಾಕಿಸ್ತಾನ ಶಸ್ತ್ರಾಸ್ತ್ರಗಳನ್ನು ಅಮೃತಸರಕ್ಕೆ ತಲುಪಿಸುತ್ತಿದೆ ಅಂತ ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ 10 ದಿನಗಳಲ್ಲಿ ಒಟ್ಟು 8 ಡ್ರೋನ್‍ಗಳು ಶಸ್ತ್ರಾಸ್ತ್ರಗಳನ್ನು ಹೊತ್ತು ತಂದು, ಭಾರತದೊಳಗೆ ಇಳಿಸಿವೆ ಎಂದು ತಿಳಿದುಬಂದಿದೆ. ಅಲ್ಲದೆ ಈ ಡ್ರೋನ್‍ಗಳು 5 ಕೆಜಿ ಹೊತ್ತೊಯ್ಯುವ ಸಾಮಥ್ಯ ಹೊಂದಿದೆ.

ಈ ರೀತಿ ಶಸ್ತ್ರಾಸ್ತ್ರಗಳನ್ನು ಭಾರತದೊಳಕ್ಕೆ ತಲುಪಿಸಿ, ಉಗ್ರರ ಮೂಲಕ ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸಲಾಗುತ್ತಿದೆ ಎನ್ನಲಾಗಿದೆ.

Contact Us for Advertisement

Leave a Reply