ಪಾಕಿಸ್ತಾನದಿಂದ ಇದೇ ಮೊದಲ ಬಾರಿಗೆ ಸ್ಮಾರ್ಟ್‌ಫೋನ್‌ ರಫ್ತು

masthmagaa.com:

ಪಾಕಿಸ್ತಾನ ಇದೇ ಮೊದಲ ಬಾರಿಗೆ ಸ್ಮಾರ್ಟ್​​ಫೋನ್ ಉತ್ಪಾದಿಸಿ ರಫ್ತು ಮಾಡೋಕೆ ಶುರು ಮಾಡಿದೆ. ಇದೇ ಮೊದಲ ಬಾರಿಗೆ ಮೇಡ್ ಇನ್ ಪಾಕಿಸ್ತಾನ ಎಂದು ಬರೆದಿರೋ 5500 ಸ್ಮಾರ್ಟ್​​ಫೋನ್​ಗಳನ್ನು ಯುಎಇಗೆ ಕಳುಹಿಸಿಕೊಟ್ಟಿದೆ. ಇನೋವಿ ಟೆಲಿಕಾಂ ಸಂಸ್ಥೆ ತಯಾರಿಸಿರೋ 4ಜಿ ಸ್ಮಾರ್ಟ್​​ಫೋನ್​​ಗಳು ಇವಾಗಿವೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಇನೋವಿ ಟೆಲಿಕಾಂ ಸಿಇಒ ಝೀಶನ್ ಮಿಯಾ ನೂರ್​​, ಮಿಡಲ್ ಈಸ್ಟ್​​​ನ ಇರಾನ್, ಇರಾಕ್ ಮತ್ತು ಪಕ್ಕದ ಅಫ್ಘಾನಿಸ್ತಾನ ನಮ್ಮ ಟಾರ್ಗೆಟ್.. ಉಳಿದಂತೆ ಸೌದಿ, ದುಬೈ ಇತ್ಯಾದಿ ಕಡೆ ಶ್ರೀಮಂತರು ವಿಶ್ವದ ಸರ್ವಶ್ರೇಷ್ಠ ಮೊಬೈಲ್​​ಗಳನ್ನು ಬಳಸ್ತಾರೆ. ಅಲ್ಲಿ ನಾವು ಸ್ಪರ್ಧೆ ಕೂಡ ಮಾಡಕ್ಕಾಗಲ್ಲ. ಆ ಸೆಗ್ಮೆಂಟ್​​ನಲ್ಲಿ ನಾವು ಕಾಲಿಡಕ್ಕೂ ಇಷ್ಟಪಡಲ್ಲ ಅಂತ ಹೇಳಿದ್ದಾರೆ. ನಾವು ಉತ್ಪಾದನೆ ಮಾಡ್ತಿರೋದು ಚೀನಾ ಮೂಲದ ಮೊಬೈಲ್ ಫೋನ್​​ಗಳನ್ನ..ಈಗ ಯುಎಇಗೆ ಕಳುಹಿಸಿರೋದು ಯಾಕಂದ್ರೆ ಅಲ್ಲಿ ಪಾಕಿಸ್ತಾನದಿಂದ ಹೋದೋರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ ಹಾಗಾಗಿ..

-masthmagaa.com

Contact Us for Advertisement

Leave a Reply