ಭಯಂಕರ ಸ್ಫೋಟದಲ್ಲಿ 65 ಮಂದಿ ಸಾವು..30 ಮಂದಿಗೆ ಗಾಯ

ಪಾಕಿಸ್ತಾನದ ಕರಾಚಿ-ರಾವಲ್​ಪಿಂಡಿ ಎಕ್ಸ್​ಪ್ರೆಸ್​​ ರೈಲಿನಲ್ಲಿ ಸ್ಫೋಟ ಸಂಭವಿಸಿದೆ. ಪಂಜಾಬ್ ಪ್ರದೇಶದ ದಕ್ಷಿಣದ ರಹೀಮ್ ಥಾರ್ ಖಾನ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅಡುಗೆಗೆ ಬಳಸುವ ಗ್ಯಾಸ್ ಕ್ಯಾನಿಸ್ಟರ್ ಸ್ಫೋಟಗೊಂಡಿದೆ ಎಂದು ಮೂಲಗಳು ತಿಳಿಸಿವೆ. ಸ್ಫೋಟದಿಂದ 3 ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ 65 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮುಲ್ತಾನ್​​ನ ಬಿವಿಹೆಚ್​​ ಬಹಾವಲ್​ಪುರ ಮತ್ತು ಪಾಕಿಸ್ತಾನ್-ಇಟಾಲಿಯನ್ ಮಾಡರ್ನ್​ ಬರ್ನ್​ ಸೆಂಟರ್​​​ಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ವೇಳೆ ಮೂವರು ರೈಲಿನಿಂದ ಹಾರಿದ್ದರು ಎಂದು ತಿಳಿದು ಬಂದಿದೆ.

Contact Us for Advertisement

Leave a Reply