ವಿಮಾನದಲ್ಲಿ ಜೋಡಿ ಸರಸ! ಸಹ ಪ್ರಯಾಣಿಕರಿಗೆ ತ್ರಾಸ!

masthmagaa.com:

ಪಾಕಿಸ್ತಾನದಲ್ಲಿ ನೆಲದ ಮೇಲೆ ಮಾತ್ರ ಅಲ್ಲ.. ಆಕಾಶದಲ್ಲೂ ವಿಚಿತ್ರ ಘಟನೆ ನಡೀತಾ ಇರುತ್ತೆ. ಕರಾಚಿಯಿಂದ ಇಸ್ಲಾಮಾಬಾದ್​​ಗೆ ಹೊರಟಿದ್ದ ಏರ್​ ಬ್ಲೂ ಕಂಪನಿಯ ವಿಮಾನದಲ್ಲಿ ಮೇ 20ರಂದು ಜೋಡಿಯೊಂದು ಹೋಗ್ತಿತ್ತು. ಈ ವೇಳೆ ವಿಮಾನ ಆಕಾಶದಲ್ಲಿ ಹಾರುತ್ತಿರುವಾಗಲೇ ಪ್ರೀತಿ ಜಾಸ್ತಿಯಾಗಿ ಕಿಸ್ ಕೊಟ್ಕೊಳ್ಳೋಕೆ ಶುರು ಮಾಡಿದ್ದಾರೆ. ಇದರಿಂದ ವಿಮಾನದಲ್ಲಿದ್ದ ಉಳಿದ ಪ್ರಯಾಣಿಕರು ಕೆರಳಿ ಕೆಂಡವಾಗಿದ್ದಾರೆ. ವಿರೋಧ ವ್ಯಕ್ತಪಡಿಸಿದ್ಧಾರೆ. ಆದ್ರೆ ಪ್ರಯಾಣಿಕರ ಎಚ್ಚರಿಕೆಗೆ ಕ್ಯಾರೆ ಎನ್ನದ ಜೋಡಿ, ನಮ್ಮನ್ನ ಕೇಳೋಕೆ ನೀವ್ಯಾರು ಅಂತ ಅವಾಜ್ ಹಾಕಿದ್ದಾರೆ. ನಂತರ ತಮ್ಮ ಪ್ರೀತಿ ಪುರಾಣ ಮುಂದುವರಿಸಿದ್ದಾರೆ. ನಂತರ ಏರ್​ಹೋಸ್ಟೆಸ್ ಬ್ಲಾಂಕೆಟ್ ಕೊಟ್ಟು, ಅದ್ನ ಹೊದ್ಕೊಂಡು ಕಿಸ್ ಮಾಡ್ಕೊಳ್ಳಿ ಅಂತ ಹೇಳಿದ್ದಾರೆ. ಇದು ಈಗ ಫುಲ್ ವಿವಾದಕ್ಕೆ ಕಾರಣವಾಗಿದೆ.

-masthmagaa.com

Contact Us for Advertisement

Leave a Reply