ನಡು ದಾರಿಯಲ್ಲಿ ‘ನಾನ್ ವಿಮಾನ ಹಾರಿಸಲ್ಲ’ ಎಂದ ಪಾಕ್ ಪೈಲಟ್!

masthmagaa.com:

ಶಿಫ್ಟ್ ಆದ್ಮೇಲೂ ಕೆಲಸ ಮಾಡೋದು ಅಂದ್ರೆ ಸ್ವಲ್ಪ ಕಷ್ಟನೆ.. ಆಗಲ್ಲ ಅನ್ನೋರೇ ಹೆಚ್ಚು.. ಅದೇ ರೀತಿ ಪಾಕಿಸ್ತಾನ್ ಇಂಟರ್​ನ್ಯಾಷನಲ್ ಏರ್​​ಲೈನ್ಸ್ ಪೈಲಟ್ ಒಬ್ಬರು ಮಾರ್ಗ ಮಧ್ಯದಲ್ಲಿ ಶಿಫ್ಟ್ ಮುಗಿದಿದ್ದಕ್ಕೆ ವಿಮಾನ ಮುನ್ನಡೆಸಲು ನಿರಾಕರಿಸಿದ್ದಾರೆ. PK-9754 ವಿಮಾನ ಸೌದಿಯ ರಿಯಾದ್​​​ನಿಂದ ಇಸ್ಲಾಮಾಬಾದ್​​ಗೆ ಟೇಕಾಫ್ ಆಗಿತ್ತು. ಆದ್ರೆ ಹವಾಮಾನ ಸರಿಯಿರಲಿಲ್ಲವಾದ್ದರಿಂದ ಸೌದಿಯ ದಮ್ಮನ್​​ನಲ್ಲಿ ತುರ್ತಾಗಿ ಲ್ಯಾಂಡ್ ಮಾಡಲಾಯ್ತು. ಆದ್ರೆ ಆಮೇಲೆ ನನ್ ಶಿಫ್ಟ್ ಟೈಂ ಆಯ್ತು. ಹೀಗಾಗಿ ನಾನು ಫ್ಲೈಟ್ ಟೇಕಾಫ್ ಮಾಡಲ್ಲ ಅಂತ ಪೈಲಟ್ ಪಟ್ಟು ಹಿಡಿದಿದ್ದಾನೆ. ಮತ್ತೊಂದ್ಕಡೆ ಪ್ರಯಾಣಿಕರು ಕೂಡ ವಿಳಂಬವಾಗ್ತಿರೋದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಮಾನದಿಂದ ಕೆಳಗಿಳಿಯಲು ನಿರಾಕರಿಸಿದ್ದಾರೆ. ವಾದ, ಪ್ರತಿವಾದ ಜೋರಾಗಿ ಈ ಗಲಾಟೆಯನ್ನು ಶಮನಗೊಳಿಸಲು ದಮ್ಮನ್​ ಏರ್​ಪೋರ್ಟ್​ ಭದ್ರತಾ ಸಿಬ್ಬಂದಿಯನ್ನು ಕರೆಸಲಾಯ್ತು. ಪ್ರಯಾಣಿಕರಿಗೆ ಹೋಟೆಲ್​​ನಲ್ಲಿ ತಂಗಲು ವ್ಯವಸ್ಥೆ ಮಾಡಲಾಯ್ತು. ನಂತರ ತಡವಾಗಿ ವಿಮಾನ ಟೇಕಾಫ್ ಆಗಿ, ಇಸ್ಲಾಮಾಬಾದ್​​ಗೆ ರೀಚ್ ಆಯ್ತು. ಈ ಬಗ್ಗೆ ಪ್ರತಿಕ್ರಿಯಿಸಿರೋ ಪಾಕಿಸ್ತಾನ್ ಇಂಟರ್​ನ್ಯಾಷನಲ್ ಏರ್​ಲೈನ್ಸ್​​​​​ನ ಸಿಬ್ಬಂದಿ, ಪೈಲಟ್ ರೆಸ್ಟ್​ ಮಾಡೋದು ಸುರಕ್ಷಿತ ವಿಮಾನ ಹಾರಾಟಕ್ಕೆ ಅನಿವಾರ್ಯ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply