ಉಮ್ರಾ ಯಾತ್ರೆ ಕೈಗೊಂಡ ಪಾಕ್ ಪ್ರಧಾನಿ, ಸೌದಿಯಲ್ಲೇ ಮಗಳ ಮದುವೆ!

masthmagaa.com:

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸೌದಿ ಅರೇಬಿಯಾಗೆ ತೆರಳಿದ್ದು, ಉಮ್ರಾ ಯಾತ್ರೆ ಕೈಗೊಂಡಿದ್ದಾರೆ. ಇದು ಪಿಎಂಎಲ್​​ಎನ್ ಪಕ್ಷದ ನಾಯಕಿ ಮರಿಯಮ್ ನವಾಜ್ ಕಣ್ಣು ಕೆಂಪಗಾಗಿಸಿದೆ. ಯಾಕಂದ್ರೆ ಮರ್ಯಮ್ ಅವರ ತಂದೆ ಈ ಹಿಂದೆ ಅಂದ್ರೆ 2014ರಲ್ಲಿ ಪ್ರಧಾನಿಯಾಗಿದ್ದಾಗ ಉಮ್ರಾ ಯಾತ್ರೆ ಕೈಗೊಂಡಿದ್ರು. ಆಗ ಟ್ವೀಟ್ ಮಾಡಿದ್ದ ಇಮ್ರಾನ್ ಖಾನ್, ದೇಶ ಅಳಿವಿನಂಚಿನಲ್ಲಿದೆ. ಆದ್ರೆ ಪ್ರಧಾನಿ ನವಾಜ್​ ಷರೀಫ್​​ ಉಮ್ರಾ ಯಾತ್ರೆ ಕೈಗೊಂಡಿದ್ದಾರೆ ಅಂತ ಹೇಳಿದ್ರು. ಇದೀಗ ಮರ್ಯಮ್ ಕೂಡ ಇಮ್ರಾನ್ ಖಾನ್​​ಗೆ ಅದೇ ಪ್ರಶ್ನೆ ಕೇಳಿದ್ದಾರೆ. ಜೊತೆಗೆ ಸೌದಿ ಅರೇಬಿಯಾದ ಗ್ರ್ಯಾಂಡ್ ಮಸೀದಿಯಲ್ಲಿ ಇಮ್ರಾನ್ ಖಾನ್​ರ ಮಲಮಗಳ ಮದುವೆ ಸಮಾರಂಭ ಕೂಡ ನಡೆದಿದೆ. ಇಮ್ರಾನ್ ಖಾನ್​​ರ ಈಗಿನ ಹೆಂಡತಿ ಬುಶ್ರಾ ಬೀಬಿಯ ಮೊದಲ ಪತಿಗೆ ಜನಿಸಿದ್ದ ಮಗಳು ಇವರಾಗಿದ್ದಾರೆ. ಈ ಮದುವೆಯನ್ನು ಕೂಡ ಸರ್ಕಾರಿ ಖರ್ಚಲ್ಲೇ ಮಾಡಲಾಗಿದೆ ಅಂತ ಮರಿಯಂ ನವಾಜ್ ಕೆಂಡಕಾರಿದ್ದಾರೆ.

-masthmagaa.com

Contact Us for Advertisement

Leave a Reply