ಪಾಕ್​​ನಲ್ಲಿ ಮಹಿಳೆಯರ ದಿನವೇ ಮಹಿಳಾ ಮೆರವಣಿಗೆ ಮೇಲೆ ಕಲ್ಲೆಸೆತ..!

masthmagaa.com:

ಪಾಕಿಸ್ತಾನ ಆಗಾಗ ಭಾರತದ ಅಲ್ಪಸಂಖ್ಯಾತರ ಬಗ್ಗೆ ಕನಿಕರ ತೋರಿಸುತ್ತಾ ಇರುತ್ತೆ. ಕಾಶ್ಮೀರದಲ್ಲಿ ಹಿಂಸಾಚಾರ ಆಗ್ತಿದೆ ಅಂತ ಬಾಯಿ ಬಡ್ಕೊಳ್ಳುತ್ತೆ. ಆದ್ರೆ ತನ್ನದೇ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮೌನವಾಗಿದೆ. ಅದಕ್ಕೆ ಸಾಕ್ಷಿ ಮಹಿಳಾ ದಿನಾಚರಣೆ ದಿನವೇ ಮಹಿಳೆಯರ ಮೇಲೆ ನಡೆದ ಈ ದೌರ್ಜನ್ಯ..

ನಿನ್ನೆ ವಿಶ್ವದಾದ್ಯಂತ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿತ್ತು. ಅದೇ ರೀತಿ ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲೂ ಮಹಿಳೆಯರು ಮೆರವಣಿಗೆ ನಡೆಸಿ, ಮಹಿಳಾ ದಿನಾಚರಣೆ ಆಚರಿಸುತ್ತಿದ್ದರು. ಈ ವೇಳೆ ಕೆಲವು ಇಸ್ಲಾಮಿಕ್ ಖಟ್ಟರ್​ಪಂಥಿಗಳು ಮಹಿಳೆಯರ ಮೇಲೆ ಕಲ್ಲು ಎಸೆದು ತಮ್ಮ ದುರ್ಬುದ್ಧಿ ತೋರಿಸಿದ್ದಾರೆ. ಕಲ್ಲು ಮಾತ್ರ ಅಲ್ಲ.. ಇಟ್ಟಿಗೆ, ಲಾಠಿ, ಚಪ್ಪಲಿ ಎಸೆದು ವಿಕೃತಿ ಮೆರೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಅಂತ ಸ್ಪಷ್ಟನೆ ಕೊಟ್ಟಿದ್ದಾರೆ.

ಕಳೆದ 3 ವರ್ಷಗಳಿಂದ ಪಾಕಿಸ್ತಾನದಲ್ಲಿ ಮಹಿಳಾ ದಿನಾಚರಣೆಯಂದು ಮಹಿಳಾ ಮೆರವಣಿಗೆ ನಡೆಸಲಾಗುತ್ತಿದೆ. ಇದರಲ್ಲಿ ಸಾವಿರಾರು ಮಹಿಳೆಯರು ಭಾಗಿಯಾಗುತ್ತಿದ್ದಾರೆ. ನನ್ನ ದೇಹ, ನನ್ನ ಇಷ್ಟ ಅನ್ನೋದು ಈ ಮೆರವಣಿಗೆಯ ಘೋಷವಾಕ್ಯವಗಿದೆ. ಮಹಿಳಾ ಕಾರ್ಯಾಚರಣೆ ವೇದಿಕೆ, ಮಹಿಳಾ ಹಕ್ಕು ಸಂಸ್ಥೆ, ಮಹಿಳೆಯರ ಪ್ರಜಾಪ್ರಭುತ್ವ ವೇದಿಕೆ, ನಾವು ಮಹಿಳೆಯರು ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಈ ಮೆರವಣಿಗೆ ನಡೆಸಲಾಗುತ್ತೆ. ಆದ್ರೆ ಈ ಬಾರಿ ಮೆರವಣಿಗೆ ವೇಳೆ ಕೆಲ ದುಷ್ಟರು ದಾಳಿ ನಡೆಸಿ, ವಿಕೃತಿ ಮೆರೆದಿದ್ದಾರೆ.

-masthmagaa.com

Contact Us for Advertisement

Leave a Reply