ಪಾಕ್​​ ವಿಪಕ್ಷ ನಾಯಕ ಶಹಬಾಜ್​​​​ ವಿದೇಶ ಪ್ರಯಾಣದ ಮೇಲೆ ನಿರ್ಬಂಧ

masthmagaa.com:

ಪಾಕಿಸ್ತಾನದ ವಿಪಕ್ಷ ನಾಯಕ, ಮಾಜಿ ಪ್ರಧಾನಿ ನವಾಜ್ ಶರೀಫ್ ಸಹೋದರ ಶಹಬಾಜ್ ಶರೀಫ್ ಯುನೈಟೆಡ್​ ಕಿಂಗ್​​ಡಮ್​​​​ಗೆ ಪ್ರಯಾಣಿಸದಂತೆ ದೇಶದ ಪ್ರಮುಖ ತನಿಖಾ ಸಂಸ್ಥೆ ಫೆಡರಲ್ ಇನ್ವೆಸ್ಟಿಗೇಷನ್ ಅಥಾರಿಟಿ ನಿರ್ಬಂಧ ವಿಧಿಸಿದೆ. ಈ ಹಿಂದೆ ಪಾಕಿಸ್ತಾನದ ಸುಪ್ರೀಂಕೋರ್ಟ್​ ಚಿಕಿತ್ಸೆ ಪಡೆಯೋಕೆ ಶಹಬಾಜ್ ಶರೀಫ್ ವಿದೇಶಕ್ಕೆ ಹೋಗಬಹುದು ಅಂತ ತಿಳಿಸಿತ್ತು. ಆದ್ರೂ ಕೂಡ ನಿರ್ಬಂಧ ವಿಧಿಸಲಾಗಿದೆ ಅಂತ ಪಿಎಂಎಲ್​​ಎನ್ ಪಕ್ಷದೋರು ಕಿಡಿಕಾರಿದ್ದಾರೆ. ಶಹಬಾಜ್ ಸಹೋದರ ನವಾಜ್ ಶರೀಫ್ ಕೂಡ ಲಂಡನ್​​​ನಲ್ಲಿ ಚಿಕಿತ್ಸೆ ಪಡೀತಾ ಇದ್ದಾರೆ. ಅದೇ ರೀತಿ 69 ವರ್ಷದ ಶಹಬಾಜ್​ಗೂ ಮೇ8ರಿಂದ ಜುಲೈ 3ರ ನಡುವಿನ ಅವಧಿಯಲ್ಲಿ ವಿದೇಶದಲ್ಲಿ ಚಿಕಿತ್ಸೆ ಪಡೆಯಬಹುದು ಅಂತ ಸುಪ್ರೀಂಕೋರ್ಟ್​ ಆದೇಶ ನೀಡಿತ್ತು. ಅದರಂತೆ ಕಳೆದ ಶನಿವಾರ ಶಹಬಾಜ್ ಯುನೈಟೆಡ್​ ಕಿಂಗ್​ಡಮ್​​​ಗೆ ತೆರಳಲು ಲಾಹೋರ್ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಆದ್ರೆ ಈ ವೇಳೆ ಅವರನ್ನು ತಡೆದಿರೋ ಫೆಡರಲ್ ಇನ್ವೆಸ್ಟಿಗೇಷನ್ ಅಥಾರಿಟಿ ಹೋಗಂಗಿಲ್ಲ ಅಂತ ತಿಳಿಸಿದೆ. ಇದ್ರಿಂದ ಸಿಟ್ಟಿಗೆದ್ದಿರೊ ಶಹಬಾಜ್ ಬೆಂಬಲಿಗರು, ಪ್ರಧಾನಿ ಇಮ್ರಾನ್ ಖಾನ್ ಆದೇಶದ ಮೇರೆಗೆ ಶಹಬಾಜ್​​ರನ್ನು ತಡೆಯಲಾಗಿದೆ ಅಂತ ಆರೋಪಿಸಿದ್ದಾರೆ.

-masthmagaa.com

Contact Us for Advertisement

Leave a Reply