ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಶುರುವಾದ್ರೆ ಪಾಕ್ ಪ್ಲಾನ್ ಫೇಲ್: ಜೈಶಂಕರ್

ಒಂದು ಬಾರಿ ಜಮ್ಮು ಕಾಶ್ಮೀರದಲ್ಲಿ ಅಭಿವೃದ್ಧಿ ಶುರುವಾದ್ರೆ ಪಾಕಿಸ್ತಾನದ 70 ವರ್ಷಗಳ ಎಲ್ಲಾ ಯೋಜನೆಗಳು ಅಂತ್ಯವಾಗುತ್ತೆ ಅಂತ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. 3 ದಿನಗಳ ಅಮೆರಿಕಾ ಪ್ರವಾಸದಲ್ಲಿರುವ ಜೈಶಂಕರ್ ವಾಷಿಂಗ್ಟನ್ ನಲ್ಲಿ ಮಾತನಾಡಿದ್ರು. ಇದೇ ವೇಳೆ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆಗಳ ಮೇಲಿನ ನಿರ್ಬಂಧದ ಬಗ್ಗೆ ಮಾತನಾಡಿದ ಅವರು, ಕಾಶ್ಮೀರದಲ್ಲಿ ಅಂತರ್ಜಾಲ ಮತ್ತು ಸಾಮಾಜಿಕ ಜಾಲತಾಣಗಳ ದುರ್ಬಳಕೆ ಮಾಡಲಾಗುತ್ತಿದೆ. ಈ ಮೂಲಕ ತಪ್ಪು ಸಂದೇಶಗಳನ್ನು ಹರಡಿ ಭಾರತ ವಿರೋಧಿಗಳ ಪಡೆ ಹುಟ್ಟಿಕೊಳ್ಳದಂತೆ ತಡೆಯೋದು ಮತ್ತು ಅಭಿವೃದ್ಧಿಯ ವೇಳೆ ಯಾವುದೇ ರೀತಿಯ ಸಾವು ನೋವು ಸಂಭವಿಸದಂತೆ ನೋಡಿಕೊಳ್ಳೋದು ಅಗತ್ಯವಾಗಿದೆ. ಅದೇ ಉದ್ದೇಶದಿಂದ ಜಮ್ಮು ಕಾಶ್ಮೀರದಲ್ಲಿ ಮೊಬೈಲ್ ಸೇವೆಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ ಅಂದ್ರು. ಅಲ್ಲದೆ ಜಮ್ಮು ಮತ್ತು ಕಾಶ್ಮೀರವನ್ನು ಅಭಿವೃದ್ಧಿಯ ಪಥದಲ್ಲಿ ತೆಗೆದುಕೊಂಡು ಹೋದ್ರೆ ಬಹಳ ಕೆಟ್ಟ ಸ್ಥಿತಿ ಎದುರಿಸ್ತಿರೋ ಪಾಕ್ ಜನ ಕೂಡ ಸ್ವ ಇಚ್ಛೆಯಿಂದ ಭಾರತಕ್ಕೆ ಬರುತ್ತಾರೆ ಅಂತ ಜೈಶಂಕರ್ ವಿಶ್ವಾಸ ವ್ಯಕ್ತಪಡಿಸಿದ್ರು.

Contact Us for Advertisement

Leave a Reply