ಚೀನಾ ಪ್ರವಾಸ ಕೈಗೊಂಡ ಪಾಕ್‌ ಪ್ರಧಾನಿ: CPEC ಬಗ್ಗೆ ಚರ್ಚೆ ನಡೆಸಲಿರುವ ನಾಯಕರು

masthmagaa:

ಪ್ರವಾಹದಿಂದ ಕಂಗೆಟ್ಟು, ಇದೀಗ ರಾಜಕೀಯ ಅಸ್ಥಿರತೆಯನ್ನ ಎದುರಿಸ್ತಿರೊ ಪಾಕಿಸ್ತಾನ ತನ್ನ ಸಮಸ್ಯೆಗಳ ಬಗ್ಗೆ ಚರ್ಚಿಸೋಕೆ ದೊಡ್ಡಣ್ಣನ ಹತ್ತಿರ ಹೋಗಿದೆ. ಚೀನಾ ಪ್ರಧಾನಿ ಲಿ ಕೆಕಿಯಾಂಗ್‌ ಅವರ ಆಮಂತ್ರಣದ ಮೇರೆಗೆ ಪಿಎಂ ಶೆಹಬಾಜ್‌ ಶರೀಫ್‌ ನಿನ್ನೆ ಚೀನಾಕ್ಕೆ ಹೋಗಿದ್ದಾರೆ. ಇವರ ಜೊತೆ ಪಾಕ್‌ನ ವಿದೇಶಾಂಗ ಸಚಿವ ಬಿಲಾವಲ್‌ ಭುಟ್ಟೊ ಜರ್ದಾರಿ, ಹಣಕಾಸು ಸಚಿವ ಇಶಕ್‌ ದಾರ್‌, ಇನ್‌ಫಾರ್ಮೇಶನ್‌ ಮಿನಿಸ್ಟರ್‌ ಮರಿಯಮ್‌ ಔರಂಗಜೇಬ್‌ ಹಾಗೂ ಇತರ ಸಚಿವರು ಕೂಡ ಈ ಭೇಟಿಯಲ್ಲಿ ಭಾಗಿಯಾಗಿದ್ದಾರೆ. ಇನ್ನು ಏಪ್ರಿಲ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಶರೀಫ್‌ರ ಮೊದಲ ಚೀನಾ ಪ್ರವಾಸವಾಗಿದೆ. ಹಾಗೂ ಜಿನ್‌ಪಿಂಗ್‌ ಮೂರನೇ ಅವಧಿಗೆ ತಮ್ಮ ಅಧಿಕಾರವನ್ನ ಭದ್ರಪಡಿಸಿಕೊಂಡ ನಂತರ ಭೇಟಿಯಾದ ಮೊದಲ ಪ್ರಧಾನಿ ಕೂಡ ಶರೀಫ್‌ ಆಗಿದ್ದಾರೆ. 2 ದಿನದ ಪ್ರವಾಸದಲ್ಲಿ ಶರೀಫ್‌, ಜಿನ್‌ಪಿಂಗ್‌ರನ್ನ ಭೇಟಿ ಮಾಡಲಿದ್ದು, ಕೆಕಿಯಾಂಗ್‌ ಜೊತೆ ಮಾತುಕತೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ 65 ಬಿಲಿಯನ್‌ ಡಾಲರ್‌ ಹೂಡಿಕೆಯ ಚೀನಾ-ಪಾಕ್‌ ಎಕನಾಮಿಕ್‌ ಕಾರಿಡರ್‌, ಭದ್ರತೆ, ಸಾಲ ಮನ್ನಾ ಸೇರಿದಂತೆ ಇತರ ಕೆಲ ವಿಷಯಗಳನ್ನ ಉಭಯ ದೇಶಗಳು ಚರ್ಚಿಸಲಿವೆ ಎನ್ನಲಾಗಿದೆ. ಇನ್ನು ಈ ಬಗ್ಗೆ ಟ್ವೀಟ್‌ ಮಾಡಿದ ಶರೀಫ್‌, ʻಚೀನಾದ ಕಮ್ಯುನಿಸ್ಟ್‌ ಪಾರ್ಟಿಯ 20ನೇ ಪಂಚವಾರ್ಷಿಕ ಸಭೆ ನಂತರ ಆಮಂತ್ರಣ ಪಡೆದ ಮೊದಲ ನಾಯಕ ಅನ್ನೊದ್ರ ಬಗ್ಗೆ ಗೌರವವಿದೆ. ಜಗತ್ತು ಹಲವಾರು ಸವಾಲುಗಳನ್ನ ಎದುರಿಸ್ತಿರೊ ಹೊತ್ತಲ್ಲಿ, ಚೀನಾ ಹಾಗೂ ಪಾಕ್‌ ಗೆಳೆಯರಾಗಿ ಹಾಗೂ ಪಾರ್ಟ್ನರ್‌ಗಳಾಗಿ ಜೊತೆ ನಿಲ್ಲುತ್ವೆ ಅಂತ ಹೇಳಿದ್ದಾರೆ.
-masthmagaa

Contact Us for Advertisement

Leave a Reply