ಪರಮೇಶ್ವರ್​​ಗೆ​ 3 ದಿನ ಟೈಂ ಕೊಟ್ಟಿದ್ಯಾಕೆ ಐಟಿ ಅಧಿಕಾರಿಗಳು..?

ಮಾಜಿ ಡಿಸಿಎಂ ಪರಮೇಶ್ವರ್ ಇವತ್ತು ಐಟಿ ವಿಚಾರಣೆಗೆ ಹಾಜರಾಗಿದ್ದಾರೆ. ಸ್ವಲ್ಪ ಹೊತ್ತು ವಿಚಾರಣೆ ನಡೆಸಿದ ಐಟಿ ಅಧಿಕಾರಿಗಳು, ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚಿಸಿದ್ದು, 3 ದಿನಗಳ ಕಾಲ ಟೈಂ ನೀಡಿದೆ. ನಂತರ ಹೊರಬಂದು ಮಾತನಾಡಿದ ಪರಮೇಶ್ವರ್​​, ಐಟಿ ವಿಚಾರಣೆಗೆ ಹಾಜರಾಗಿದ್ದೆ. ಅವರು ಶಿಕ್ಷಣ ಸಂಸ್ಥೆಗೆ ಸಂಬಂಧಿಸಿದ ತುಂಬಾ ದಾಖಲೆಗಳನ್ನು ವಶಕ್ಕೆ ಪಡೆದಿದ್ದು, ಅವರಿಗೂ ಸ್ವಲ್ಪ ಟೈಂ ಬೇಕಾಗುತ್ತೆ. ಅದೇ ರೀತಿ ನನಗೂ ದಾಖಲೆಗಳನ್ನು ಸಲ್ಲಿಸಲು ಮೂರು ದಿನಗಳ ಕಾಲ ಸಮಯ ನೀಡಿದ್ದಾರೆ. ಅಲ್ಲದೆ ನನ್ನ ಪಿಎ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದರು ಅವರ ಕುಟುಂಬಕ್ಕೆ ಸಹಕಾರ ನೀಡಬೇಕಾದ ಜವಾಬ್ದಾರಿ ನನ್ನ ಮೇಲಿದೆ. ಹೀಗಾಗಿ ವಿಚಾರಣೆಗೂ ಮುನ್ನ ನನಗೂ ಸ್ವಲ್ಪ ಕಾಲಾವಕಾಶ ನೀಡಿದ್ದಾರೆ ಅಂದ್ರು.

ಕಳೆದ ವಾರ ಪರಮೇಶ್ವರ್ ನಿವಾಸ ಮತ್ತು ಶಿಕ್ಷಣ ಸಂಸ್ಥೆಗಳ ಮೇಲೆ ಐಟಿ  ಅಧಿಕಾರಿಗಳು ದಾಳಿ ನಡೆಸಿ, ಸುಮಾರು 2 ದಿನಗಳ ಕಾಲ ಶೋಧ ನಡೆಸಿದ್ದರು. ಆದ್ರೆ ಇದೇ ವೇಳೆ ಪರಮೇಶ್ವರ್ ಪಿಎ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದರು.

 

Contact Us for Advertisement

Leave a Reply