ಸೂಸೈಡ್‌ ನೋಟ್‌ ಬರೆದಿಟ್ಟ “ಪಾಯಲ್‌”

masthmagaa.com:

ಬಹುಭಾಷಾ ನಟಿ ಪಾಯಲ್ ಘೋಷ್ ಅವರು ಸೋಷಿಯಲ್ ಮೀಡಿಯಾದಲ್ಲಿ ಆತ್ಮಹತ್ಯೆ ಪತ್ರ ಶೇರ್ ಮಾಡಿಕೊಂಡು ಅಭಿಮಾನಿಗಳಲ್ಲಿಕಳವಳ ಸೃಷ್ಠಿ ಮಾಡಿದ್ದಾರೆ. ಸೂಸೈಡ್ ನೋಟ್‌ ಬರೆದು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡುವ ಮೂಲಕ ನಟಿ ಸಂಚಲನ ಮೂಡಿಸಿದ್ದಾರೆ. ಅದರಲ್ಲಿ “ನಾನು ಪಾಯಲ್ ಘೋಷ್, ನಾನು ಆತ್ಮಹತ್ಯೆ ಅಥವಾ ಹೃದಯಾಘಾತದಿಂದ ಸತ್ತರೆ ಅದಕ್ಕೆ ಕಾರಣರಾದವರು ಎಂದು ಬರೆದುಕೊಂಡಿದ್ದಾರೆ ಆದರೆ ಅದರಲ್ಲಿ ಯಾರ ಹೆಸರನ್ನೂ ಹೇಳಿಲ್ಲ, ಯಾವುದೇ ಸೂಚನೆಯನ್ನೂ ನೀಡಿಲ್ಲ. ಇವರು ಬರೆದ ಲೆಟರ್‌ನಲ್ಲಿ “ತಾಜ್‌ ಮಹಲ್‌ ಟವರ್‌” ಎಂದು ಮೆನ್ಷನ್‌ ಇದೆ. ಇದರಿಂದ ಅವರ ಫ್ಯಾನ್ಸ್‌ ಗೊಂದಲಕ್ಕೆ ಸಿಲುಕಿದ್ದಾರೆ. ಆಕೆಯ ಯೋಗಕ್ಷೇಮದ ಬಗ್ಗೆ ಕೇಳುತ್ತಿದ್ದಾರೆ.
ತೆಲುಗು, ಹಿಂದಿ ಮತ್ತು ಕನ್ನಡ ಸಿನಿಮಾದಲ್ಲೂ ನಟಿ ಪಾಯಲ್ ಅಭಿನಯಿಸಿದ್ದಾರೆ. ಕನ್ನಡದ `ವರ್ಷಧಾರೆ’ ಚಿತ್ರದಲ್ಲಿ ನಟಿಸಿದ್ದಾರೆ. ಹಿಂದಿ ಕಿರುತೆರೆಯ `ಸಾಥ್ ನಿಭಾನಾ ಸಾಥಿಯಾ’ ಸೀರಿಯಲ್‌ನಲ್ಲಿ ರಾಧಿಕಾ ಎಂಬ ಪಾತ್ರದ ಮೂಲಕ ಗಮನ ಸೆಳೆದಿದ್ದರು.
ಕಳೆದ ವರ್ಷ ಮುಸುಕು ಹಾಕಿಕೊಂಡು ದುಷ್ಕರ್ಮಿಗಳು ರಾತ್ರಿ 10 ಗಂಟೆ ಸುಮಾರಿಗೆ ಔಷಧಿ ತರಲು ಹೋಗಿದ್ದಾಗ ನಟಿಯ ಮೇಲೆ ಹಲ್ಲೆ ನಡೆಸಿದ್ರು, ಈ ವೇಳೆ ನಟಿಯ ಕೈಗೆ ರಾಡ್‌ನಿಂದ ಪೆಟ್ಟು ಬಿದ್ದಿತ್ತು ಅವರ ಮೇಲೆ ಆಸಿಡ್‌ ದಾಳಿಗೂ ಮುಂದಾಗಿದ್ರು ಎಂದು ಪಾಯಾಲ್‌ ಹೇಳಿದ್ರು. ಈ ಇನ್ಸಿಡೆಂಟ್‌ ಆದಮೇಲೆ ಅವರ ತೀರಾ ಕುಗ್ಗಿ ಹೋಗಿದ್ರು. ಈಗ ಈ ಲೆಟರ್‌ ನೋಡಿ ಅವರ ಅಭಿಮಾನಿಗಳು ಕಾಮೆಂಟ್‌ ಮಾಡುವ ಮೂಲಕ ಕಳವಳ ವ್ಯಕ್ತಪಡಿಸ್ತಾ ಇದಾರೆ.

-masthmagaa.com

Contact Us for Advertisement

Leave a Reply