ಭಾರತ ಏಷ್ಯಾಕಪ್‌ನಲ್ಲಿ ಭಾಗವಹಿಸದಿದ್ದರೆ , ನಾವು ವರ್ಲ್ಡ್‌ ಕಪ್‌ ಆಡಲ್ಲ: ಪಾಕಿಸ್ತಾನ

masthmagaa.com:

ಏಷ್ಯಾಕಪ್‌ನಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗಲ್ಲ ಅಂತ ಹೇಳಿದ್ದ BCCI ಕಾರ್ಯದರ್ಶಿ ಜಯ್‌ ಶಾ ಹೇಳಿಕೆಗೆ ಪಾಕ್‌ ಪ್ರತಿಕ್ರಿಯೆ ನೀಡಿದೆ. ಹಾಗೇನಾದ್ರೂ ಭಾರತ ಏಷ್ಯಾಕಪ್‌ನಲ್ಲಿ ಭಾಗವಹಿಸೋಕೆ ಪಾಕಿಸ್ತಾನಕ್ಕೆ ಬಂದಿಲ್ಲ ಅಂದ್ರೆ, ನಾವು ಕೂಡ 2023ರಲ್ಲಿ ಭಾರತದಲ್ಲಿ ನಡೆಯಲಿರೋ ಏಕದಿನ ವಿಶ್ವಕಪ್‌ನಿಂದ ಹೊರಗುಳಿತಿವಿ ಅಂತ ಹೇಳಿದೆ. ಅಂದ್ಹಾಗೆ ಪಾಕಿಸ್ತಾನದಲ್ಲಿ ಮುಂದಿನ ವರ್ಷ ನಡೆಯಲಿರೋ ಏಷ್ಯಾ ಕಪ್‌ನಲ್ಲಿ ಭಾರತ ತಂಡ ಭಾಗವಹಿಸಲ್ಲ. ಬದ್ಲಾಗಿ ಬೇರೆ ತಟಸ್ಥ ಸ್ಥಳದಲ್ಲಿ ನಡೆಸಿದ್ರೆ ತಂಡ ಆಡೋದಾಗಿ ನೆನ್ನೆ ಜಯ್‌ ಶಾ ಹೇಳಿದ್ದರು.

-masthmagaa.com

Contact Us for Advertisement

Leave a Reply