ಅಮೆರಿಕ FBI ಬಳಿಯೂ ಇದೆಯಂತೆ ಪೆಗಾಸಸ್ ಸಾಫ್ಟ್​ವೇರ್​​!

masthmagaa.com:

ಭಾರತದಲ್ಲಿ ಪೆಗಾಸಸ್​ ಸ್ಪೈವೇರ್​ ಸಾಫ್ಟ್​ವೇರ್​ ಬಗ್ಗೆ ಚರ್ಚೆಗಳು ನಡೀತಿರುವಾಗಲೇ, ಜಗತ್ತಿನ ಪವರ್​ಫುಲ್​​ ಹ್ಯಾಕಿಂಗ್​ ಸಾಫ್ಟ್​ವೇರ್​ಗಳಲ್ಲಿ ಒಂದಾಗಿರೋ ಪೆಗಾಸಸ್​​ ಅನ್ನ ತಾನು ಖರೀದಿಸಿರೋದಾಗಿ ಅಮೆರಿಕದ ಫೆಡರಲ್​ ಬ್ಯೂರೋ ಆಫ್​ ಇನ್ವೆಸ್ಟಿಗೇಷನ್​ – FBI ಖಚಿತಪಡಿದೆ. ಆದ್ರೆ ಇಸ್ರೇಲ್​ನ NSO ಗ್ರೂಪ್​ನಿಂದ ತಾನು ಪರ್ಚೇಸ್​ ಮಾಡಿರೋದು ಲಿಮಿಟೆಡ್​ ಲೈಸೆನ್ಸ್​ನ ಸಾಫ್ಟ್​ವೇರ್​. ಅಂದ್ರೆ ಈ ಸಾಫ್ಟ್​ವೇರ್​​ನ ಪರೀಕ್ಷೆ ಮತ್ತು ಮೌಲ್ಯಮಾಪನಕ್ಕೆ ಮಾತ್ರ ಆ್ಯಕ್ಸೆಸ್ ಇದೆ. ಅದನ್ನ ಮಾಡ್ತಿದ್ದೀವಿ. ಅದ್​ಬಿಟ್ರೆ ಇದುವರೆಗೆ ಯಾವ ಪ್ರಕರಣದ ತನಿಖೆಗೂ ಪೆಗಾಸಸ್​ ಸಾಫ್ಟ್​ವೇರ್ ಅನ್ನ ಬಳಸಿಕೊಂಡಿಲ್ಲ ಅಂತಾನೂ ಎಫ್​ಬಿಐ ಸ್ಪಷ್ಟನೆ ಕೊಟ್ಟಿದೆ. ಈ ಸಾಫ್ಟ್​ವೇರ್​ ರಾಂಗ್ ಹ್ಯಾಂಡ್ಸ್​ಗೆ ಹೋಗ್ಬಾರ್ದು ಅನ್ನೋ ಕಾರಣಕ್ಕೆ ಇದರ ಪರೀಕ್ಷೆ ಮತ್ತು ಮೌಲ್ಯ ಮಾಪನ ಮಾಡ್ತಿರೋದಾಗಿ ಹೇಳಿದೆ. ಅಂದ್ಹಾಗೆ 2019ರಲ್ಲಿ ಡೊನಾಲ್ಡ್ ಟ್ರಂಪ್​ ಅವಧಿಯಲ್ಲಿ ಈ ಸಾಫ್ಟ್​ವೇರ್​ ಅನ್ನ ಎಫ್​ಬಿಐ ಖರೀದಿಸಿತ್ತು. ಆದ್ರೆ ಬೈಡೆನ್​ ಸರ್ಕಾರ ಇತ್ತೀಚೆಗಷ್ಟೇ ಇಸ್ರೇಲ್​​ನ ಎನ್​​ಎಸ್​ಒ ಗ್ರೂಪ್​ ಅನ್ನ ವಾಣಿಜ್ಯ ಇಲಾಖೆಯ ಕಪ್ಪುಪಟ್ಟಿ – ಬ್ಲಾಕ್​ಲಿಸ್ಟ್​ಗೆ ಸೇರಿಸಿದೆ. ಇದರ ಹ್ಯಾಕಿಂಗ್ ಟೂಲ್ಸ್ ಬಳಸಿಕೊಂಡು ಸರ್ಕಾರಗಳು ತಮ್ಮ ವಿರೋಧಿಗಳನ್ನ ಮತ್ತು ಪತ್ರಕರ್ತರನ್ನ ಟಾರ್ಗೆಟ್​ ಮಾಡ್ಬೋದು ಅನ್ನೋ ಕಾರಣ ಕೊಟ್ಟು ಬ್ಲಾಕ್​ಲಿಸ್ಟ್​ಗೆ ಸೇರಿಸಿತ್ತು. ಇಂಥಾ ಟೈಮಲ್ಲೇ ಎಫ್​ಬಿಐ​ ತನ್ನ ಬಳಿ ಪೆಗಾಸಸ್​ ಇದೆ ಅನ್ನೋದನ್ನ ಬಹಿರಂಗಪಡಿಸಿರೋದು ಸಾಕಷ್ಟು ಕುತೂಹಲ ಕೆರಳಿಸಿದೆ. ಸದ್ಯ ಪೆಗಾಸಸ್​ ಸಾಫ್ಟ್​ವೇರ್​ ಬಗ್ಗೆ ಮೌಲ್ಯ ಮಾಪನ ಮಾಡ್ತಿರೋ ಎಫ್​ಬಿಐಗೆ ಈ ಸಾಫ್ಟ್​ವೇರ್​ ಬಗ್ಗೆ ಸಂಪೂರ್ಣ ತೃಪ್ತಿ ಇಲ್ಲ ಅಂತ ಮೂಲಗಳು ತಿಳಿಸಿವೆ. ಯಾಕಂದ್ರೆ ಸಾಫ್ಟ್​ವೇರ್​ ಜೊತೆಗೆ ಎನ್​ಎಸ್​​ಒ ಸೆನ್ಸಾರ್​ಗಳನ್ನ ಅಳವಡಿಸಿರುತ್ತೆ. ಇದರಿಂದ ಒಂದ್ವೇಳೆ ಸರ್ಕಾರ ಸಾಫ್ಟ್​ವೇರ್​ನ ಲೊಕೇಷನ್​ ಅನ್ನ ಚೇಂಜ್​ ಮಾಡಿದ್ರೆ ಅದರ ಬಗ್ಗೆ ಇಸ್ರೇಲ್​ನ ಎನ್​ಎಸ್​ಒ ಗ್ರೂಪ್​ಗೂ ಅಲರ್ಟ್ ಮೆಸೇಜ್​ ಹೋಗುತ್ತೆ. ಜೊತೆಗೆ ಈ ಸಾಫ್ಟ್​ವೇರ್​ ಅನ್ನ ಎನ್​ಎಸ್​ಒ ಗ್ರೂಪ್​​ನ ಇಂಜಿನಿಯರ್​ಗಳೇ ಇನ್​ಸ್ಟಾಲ್ ಮಾಡಬೇಕು ಅಂತಿದೆ. ಇದಕ್ಕೆಲ್ಲಾ ಎಫ್​ಬಿಐ ವಿರೋಧ ವ್ಯಕ್ತಪಡಿಸಿತ್ತು. ಫೈನಲಿ ಈ ಟೆಕ್ನಾಲಜಿಯನ್ನ ದೊಡ್ಡ ಕಂಟೈನರ್​ನಲ್ಲಿ ಇಡಲು ಎನ್​ಎಸ್​ಒ ಮತ್ತು ಎಫ್​ಬಿಐ ಒಪ್ಪಿಕೊಂಡಿವೆ ಅಂತ ಮೂಲಗಳು ಹೇಳಿವೆ. ಪೆಗಾಸಸ್ ಮೂಲಕ ಓರ್ವ ವ್ಯಕ್ತಿಯ ಫೋನಿನ ಸಂಪೂರ್ಣ ಕಂಟ್ರೋಲ್​ ಪಡೀಬಹುದು. ಆ ವ್ಯಕ್ತಿಯ ಮೊಬೈಲ್​ಗೆ ಬರುವ ಮೆಸೇಜ್​ನಿಂದ ಹಿಡಿದು ಫೋನ್​ ಕಾಲ್ಸ್​ವರೆಗೆ ಎಲ್ಲಾ ಕಂಟ್ರೋಲ್​ ಸಿಗುತ್ತೆ. ಅಲ್ಲದೆ ಆ ವ್ಯಕ್ತಿಯ ಫೋನ್​ ಅನ್ನ ರಿಮೋಟ್​ ಲಿಸನಿಂನ್​ ಡಿವೈಸ್​ ಥರನೂ ಬಳಸಿಕೊಳ್ಳಬಹುದು. ಇದೇ ಕಾರಣಕ್ಕೆ ಈ ಸಾಫ್ಟ್​ವೇರ್ ಇರೋ ದೇಶಗಳು ಇದನ್ನ ದುರುಪಯೋಗ ಪಡಿಸಿಕೊಳ್ಳಬಹುದು, ಎದುರಾಳಿಯನ್ನ ಟಾರ್ಗೆಟ್​ ಮಾಡಬಹುದು ಅನ್ನೋದು ವಿವಾದಕ್ಕೆ ಕಾರಣವಾಗಿದೆ. ಆದ್ರೆ ಪೆಗಾಸಸ್ ಅಭಿವೃದ್ಧಿಪಡಿಸಿರೋ ಎನ್​ಎಸ್​ಒ ಗ್ರೂಪ್​ ಹೇಳೋದೇ ಬೇರೆ. ಭಯೋತ್ಪಾದಕರನ್ನ, ಅಪರಾಧಿಗಳನ್ನ ಹಿಡಿಯಲು ತನ್ನ ಸಾಫ್ಟ್​ವೇರ್​ ತುಂಬಾ ಯೂಸ್​ ಆಗುತ್ತೆ ಅನ್ನೋದು ಅದರ ವಾದ.

-masthmagaa.com

Contact Us for Advertisement

Leave a Reply