ಲಾಕ್​ಡೌನ್​ ಬಳಿಕ 10, 12ನೇ ತರಗತಿ ಪರೀಕ್ಷೆ: CBSE ಸ್ಪಷ್ಟನೆ

masthmagaa.com:

ಲಾಕ್​ಡೌನ್ ನಿರ್ಬಂಧಗಳನ್ನ ತೆಗೆದ ಬಳಿಕ​ 10ನೇ ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಉಳಿದಿರುವ ಎಲ್ಲಾ ಪರೀಕ್ಷೆಗಳನ್ನ ನಡೆಸಲಾಗುವುದು ಅಂತ ಸಿಬಿಎಸ್​ಇ ಪ್ರಕಟಣೆ ಹೊರಡಿಸಿದೆ. ಪದವಿಪೂರ್ವ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆಗಳು ನಿರ್ಣಾಯಕ ಎಂದಿರೋ ಬೋರ್ಡ್, ಪರೀಕ್ಷೆಗೂ 10 ದಿನ ಮೊದಲೇ ವಿದ್ಯಾರ್ಥಿಗಳಿಗೆ ನೋಟಿಸ್ ನೀಡಲಾಗುವುದು ಅಂತ ಸ್ಪಷ್ಟಪಡಿಸಿದೆ.

ಸಿಬಿಎಸ್​ಇ 10ನೇ ತರಗತಿಯ ಪರೀಕ್ಷೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಸಾಕಷ್ಟು ಗೊಂದಲಗಳಿದ್ದವು. ಆದ್ರೆ ಈ ಬಗ್ಗೆ ಮತ್ತೊಮ್ಮೆ ಸ್ಪಷ್ಟನೆ ಕೊಟ್ಟಿರೋ ಬೋರ್ಡ್, ಲಾಕ್​ಡೌನ್ ನಿರ್ಬಂಧ ತೆರವುಗೊಳಿಸಿದ ಬಳಿಕ 29 ವಿಷಯಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದಿದೆ. ಅಲ್ಲದೆ ಏಪ್ರಿಲ್ 1ರಂದು ಹೊರಡಿಸಿದ ಪ್ರಕಟಣೆಯಂತೆ ಪರೀಕ್ಷೆ ನಡೆಸುವ ಕುರಿತು ತನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಅಂತ ಹೇಳಿದೆ.

ಈಗಾಗಲೇ ನಡೆಸಿದ ಪರೀಕ್ಷೆಗಳ ಮೌಲ್ಯಮಾಪನ ಪ್ರಾರಂಭಿಸಲು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿದೆ ಅಂತ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

-masthmagaa.com

Contact Us for Advertisement

Leave a Reply