ಮನುಷ್ಯನಿಂದ ಸಾಕು ನಾಯಿಗೂ ಹರಡಿತು ಕೊರೋನಾ ವೈರಸ್..!

masthmagaa.com:

ಜಾಗತಿಕವಾಗಿ ಮರಣ ಮೃದಂಗ ಬಾರಿಸಿ ತೀವ್ರ ಆತಂಕಕ್ಕೆ ಕಾರಣವಾಗಿರುವ ಕೊರೋನಾ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡಿದೆ ಅಂತ ಪ್ರಾಥಮಿಕ ವರದಿಗಳು ಹೇಳಿವೆ. ಆದರೆ ಹಾಂಗ್​ಕಾಂಗ್​ನಲ್ಲಿ ಕೊರೋನಾ ಪೀಡಿತ 60 ವರ್ಷ ವಯಸ್ಸಿನ ಮಹಿಳೆಯಿಂದ ಆಕೆಯ ಸಾಕು ನಾಯಿಗೂ ಸೋಂಕು ತಗುಲಿರುವ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪ್ರಾಣಿ ಕೇಂದ್ರದಲ್ಲಿ ನಾಯಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಿ ತಜ್ಞರು ಕೂಡ ಇದು ಮನುಷ್ಯರಿಂದ ಪ್ರಾಣಿಗೆ ಹರಡಿರುವ ಪ್ರಕರಣ ಅಂತ ಹೇಳಿದ್ದಾರೆ. ಈಗಾಗಲೇ ವೈರಸ್​ ತಗುಲಿರುವ ಎರಡು ನಾಯಿಗಳನ್ನ ನಿಗಾದಲ್ಲಿ ಇಡಲಾಗಿದೆ. ಈ ಹಿನ್ನೆಲೆ ಸೋಂಕು ತಗುಲಿರುವ ನಾಯಿಗಳ ಮೇಲೆ 14 ದಿನಗಳವರೆಗೆ ನಿಗಾ ಇಡಬೇಕು ಅಂತ ಅಲ್ಲಿನ ಸರ್ಕಾರ ಹೇಳಿದೆ.

ಹಾಂಗ್​ಕಾಂಗ್​ನಲ್ಲಿ ಇದುವರೆಗೆ 104 ಜನರಲ್ಲಿ ಕೊರೋನಾ ವೈರಸ್​ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ.

-masthmagaa.com

ಇನ್ನು ಕೊರೋನಾ ಬಗ್ಗೆ ಹರಡುತ್ತಿರುವ ಸುಳ್ಳು ಸುದ್ದಿಗಳ ಬಗ್ಗೆ ಜಾಗೃತಿ ಮೂಡಿಸುವ masthmagaa.comನ ಈ ವಿಶೇಷ ವಿಡಿಯೋ ನೋಡಿ.

 

Contact Us for Advertisement

Leave a Reply