ಪೆಟ್ರೋಲ್- ಡೀಸೆಲ್ ರೇಟ್ ಜಾಸ್ತಿಯಾಗ್ತಿರೋದ್ಯಾಕೆ..?

masthmagaa.com:

ದೇಶದಲ್ಲಿ ಪೆಟ್ರೋಲ್-ಡೀಸೆಲ್ ದರ ಗಗನಕ್ಕೇರುತ್ತಿದ್ದು, ವಿರೋಧ ಜಾಸ್ತಿಯಾಗ್ತಿದೆ. ಅದ್ರ ಬೆನ್ನಲ್ಲೇ ಇವತ್ತು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರದಾನ್ ಮಾತನಾಡಿದ್ದು, ಜಾಗತಿಕ ಮಟ್ಟದಲ್ಲಿ ಕಚ್ಚಾತೈಲ ದರ ಜಾಸ್ತಿಯಾಗಿರೋದ್ರಿಂದ ದೇಶದಲ್ಲಿ ತೈಲ ದರ ಜಾಸ್ತಿಯಾಗಿದೆ. ಪ್ರತಿ ಬ್ಯಾರಲ್​​ಗೆ 70 ಡಾಲರ್​​​​ಗಿಂತ ಜಾಸ್ತಿಯಾಗಿದೆ. ಭಾರತಕ್ಕೆ ಬೇಕಾದ ಶೇ.80ರಷ್ಟು ತೈಲವನ್ನು ವಿದೇಶದಿಂದ ಆಮದು ಮಾಡಿಕೊಳ್ಳುತ್ತೆ ಅಂತ ಹೇಳಿದ್ದಾರೆ. ಜೊತೆಗೆ ತೈಲವನ್ನು ಜಿಎಸ್​ಟಿ ವ್ಯಾಪ್ತಿಗೆ ತರಬೇಕಾ ಬೇಡ್ವಾ ಅನ್ನೋದನ್ನ ಜಿಎಸ್​​ಟಿ ಸಮಿತಿ ನಿರ್ಧರಿಸಬೇಕು. ಒಂದ್ವೇಳೆ ಪೆಟ್ರೋಲ್, ಡೀಸೆಲ್ ಜಿಎಸ್​ಟಿ ವ್ಯಾಪ್ತಿಗೆ ಬಂದ್ರೆ ಬೆಲೆಯಲ್ಲಿ ಇಳಿಕೆಯಾಗುತ್ತೆ ಅಂತಲೂ ತಿಳಿಸಿದ್ದಾರೆ. ಇನ್ನು ಪೆಟ್ರೋಲ್- ಡೀಸೆಲ್ ದರ ಏರಿಕೆ ವಿಚಾರವಾಗಿ ಕೇಂದ್ರವನ್ನು ಗುರಿಯಾಗಿಸಿರೋ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ತೆರಿಗೆ ವಸೂಲಿ ಮಹಾಮಾರಿಯ ಅಲೆಗಳು ಬರುತ್ತಲೇ ಇವೆ. ಕಳೆದ 13 ತಿಂಗಳಲ್ಲಿ ಪೆಟ್ರೋಲ್​​ಗೆ 25 ರೂಪಾಯಿ 72 ಪೈಸೆ, ಡೀಸೆಲ್​​ಗೆ 23 ರೂಪಾಯಿ 92 ಪೈಸೆ ಬೆಲೆ ಏರಿಕೆಯಾಗಿದೆ ಅಂತ ಟ್ವೀಟ್ ಮಾಡಿದ್ದಾರೆ.

-masthmagaa.com

Contact Us for Advertisement

Leave a Reply