ಪೆಟ್ರೋಲ್​, ಡೀಸೆಲ್ ಬೆಲೆ ಏರಿಕೆಗೆ ಇದೇ ಕಾರಣ ಎಂದ ಪೆಟ್ರೋಲಿಯಂ ಸಚಿವರು

masthmagaa.com:

ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ದಿನದಿಂದ ದಿನಕ್ಕ ಏರ್ತಾ ಹೋಗ್ತಿದೆ. ಈ ನಡುವೆ ಮಾತನಾಡಿರೋ ಕೇಂದ್ರ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವ ಧರ್ಮೇಂದ್ರ ಪ್ರಧಾನ್, ಭಾರತದಲ್ಲಿ ಇಂಧನ ಬೆಲೆ ಹೆಚ್ಚಾಗಲು ಪ್ರಮುಖ ಕಾರಣ ಏನಂದ್ರೆ ನಾವು ಬಳಸುವ ಒಟ್ಟು ಇಂಧನದಲ್ಲಿ 80 ಪರ್ಸೆಂಟ್​ ಇಂಧನವನ್ನ ವಿದೇಶದಿಂದ ಆಮದು ಮಾಡಿಕೊಳ್ಳಬೇಕಿದೆ ಅಂತ ಹೇಳಿದ್ದಾರೆ. ಜೊತೆಗೆ, ಮರುಪಾವತಿ ಮಾಡಬೇಕಾದ ಕೋಟ್ಯಂತರ ಮೌಲ್ಯದ ತೈಲ ಬಾಂಡ್​ಗಳನ್ನ ಕಾಂಗ್ರೆಸ್ ಸರ್ಕಾರ ಬಿಟ್ಟುಹೋಗಿದೆ ಅಂತ ಅರ್ಥಶಾಸ್ತ್ರಜ್ಞರು ಹೇಳ್ತಿದ್ದಾರೆ. ಹೀಗಾಗಿ ನಾವು ಈಗ ಅದರ ಬಡ್ಡಿ ಮತ್ತು ಅಸಲು ಎರಡನ್ನೂ ಪಾವತಿ ಮಾಡುತ್ತಿದ್ದೇವೆ. ಇದು ಕೂಡ ಇಂಧನ ಬೆಲೆ ಹೆಚ್ಚಳಕ್ಕೆ ಕಾರಣ ಅಂತ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಮತ್ತೊಂದುಕಡೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪೆಟ್ರೋಲ್ ಮತ್ತು ಡೀಸೆಲ್​ ಮೇಲಿನ ತೆರಿಗೆ ಅಥವಾ ವ್ಯಾಟ್​ ಅನ್ನ ಕಮ್ಮಿ ಮಾಡ್ಬೇಕು ಅನ್ನೋ ಕೂಗು ಕೇಳಿ ಬರ್ತಿದೆ. ಆದ್ರೆ ತಮಿಳುನಾಡಿನಲ್ಲಿ ಸದ್ಯಕ್ಕೆ ಪೆಟ್ರೋಲ್ ಭವಿಷ್ಯದಲ್ಲಿ ಮಾಡ್ತೀವಿ ಅಂತ ತಮಿಳುನಾಡು ಸರ್ಕಾರ ಅಲ್ಲಿನ ವಿಧಾನಸಭೆಯಲ್ಲಿ ಹೇಳಿದೆ.

-masthmagaa.com

Contact Us for Advertisement

Leave a Reply