ಮತ್ತೆ ಏರಿದ ಪೆಟ್ರೋಲ್, ಡೀಸೆಲ್! ಸರ್ಕಾರ ಹೇಳಿದ್ದೇನು?

masthmagaa.com:

ಇವತ್ತು ಮತ್ತೆ ಪೆಟ್ರೋಲ್‌, ಡೀಸೆಲ್‌ ಬೆಲೆ 80 ಪೈಸೆ ಏರಿಕೆ ಆಗಿದೆ. ಕಳೆದ 5 ದಿನದಲ್ಲಿ 4ನೇ ಬಾರಿಗೆ ಪೆಟ್ರೋಲ್‌, ಡೀಸೆಲ್‌ದರದಲ್ಲಿ ಏರಿಕೆ ಆಗಿದೆ. ಅಂದಹಾಗೆ ಕರ್ನಾಟಕದಲ್ಲಿ ಪೆಟ್ರೋಲ್‌ ದರ ಪ್ರತೀ ಲೀಟರ್‌ಗೆ 102.26 ಪೈಸೆ ಆಗಿದೆ. ಪ್ರತೀ ಡೀಸೆಲ್‌ಗೆ 86.58 ಪೈಸೆ ಇದೆ. ಇನ್ನು ಕಾಂಗ್ರೆಸ್‌ ಬೆಲೆ ಏರಿಕೆಯನ್ನ ವಿರೋಧಿಸಿ ಮಾರ್ಚ್‌ 31 ರಂದು ಪ್ರತಿಭಟನೆ ನಡೆಸಲಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ರಷ್ಯಾ ಯುಕ್ರೇನ್‌ ಯುದ್ಧ ನಡೆಯುತ್ತಿರುವ ಕಾರಣ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲೆ ಇಂಧನದ ಬೆಲೆ ಜಾಸ್ತಿ ಆಗಿದೆ. ಹಾಗೆ ಇದು ಸರ್ಕಾರದ ಕಂಟ್ರೋಲ್‌ನಲ್ಲಿ ಇಲ್ಲ ಅಂತ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply