ಫಿಲಿಪ್ಪೀನ್ಸ್ ದೋಣಿಗಳಿಗೆ ಜಲಫಿರಂಗಿ ಹಾರಿಸಿ ಚೀನಾ ಚೆಲ್ಲಾಟ!

masthmagaa.com:

ಚೀನಾದ ಕರಾವಳಿ ಕಾವಲು ಪಡೆ ನೌಕೆಗಳು ವಿವಾದಿತ ದಕ್ಷಿಣ ಚೀನಾ ಸಾಗರದಲ್ಲಿ ನಮ್ಮ ದೋಣಿಗಳ ಮೇಲೆ ಜಲಫಿರಂಗಿ ಪ್ರಯೋಗಿಸಿವೆ ಅಂತ ಫಿಲಿಪ್ಪೀನ್ಸ್ ಆರೋಪ ಮಾಡಿದೆ. ಈ ದೋಣಿಗಳು ಫಿಲಿಪ್ಪೀನ್​ ನೌಕಾಪಡೆ ಸಿಬ್ಬಂದಿಗೆ ಅಗತ್ಯ ವಸ್ತುಗಳನ್ನು ಸಾಗಿಸೋ ಕೆಲಸ ಮಾಡ್ತಿದ್ವು. ಈ ವೇಳೆ ಅಲ್ಲೇ ಇದ್ದ ನಮ್ಮ​ ನೌಕೆಗಳು ಕೂಡ ಚೀನಾದ ನೌಕೆಗಳಿಗೆ ಹಿಂದೆ ಸರಿಯುವಂತೆ ಆಗ್ರಹಿಸಿದ್ವು ಅಂತ ಫಿಲಿಪ್ಪೀನ್ಸ್ ಹೇಳಿದೆ. ಸ್ಪ್ರಾಟ್ಲಿ ಐಲ್ಯಾಂಡ್​​​ಗೆ ಹೋಗುತ್ತಿರುವಾಗ ಈ ಘಟನೆ ಸಂಭವಿಸಿದೆ. ಇದ್ರಿಂದ ಯಾರಿಗೂ ಯಾವುದೇ ಹಾನಿಯಾಗಿಲ್ಲ. ಆದ್ರೆ ನೌಕಾಪಡೆಗೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಚೀನೀ ನೌಕೆಗಳ ಈ ಕೃತ್ಯ ಕಾನೂನು ಬಾಹಿರ, ನಾವು ತೀವ್ರವಾಗಿ ಖಂಡಿಸ್ತೀವಿ ಅಂತ ಫಿಲಿಪ್ಪೀನ್​ ವಿದೇಶಾಂಗ ಕಾರ್ಯದರ್ಶಿ ಟೆಡೆರೋ ಲೊಕ್ಸಿನ್ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply